ಉಡುಪಿ | ವ್ಯಕ್ತಿ ನಾಪತ್ತೆ


ಉಡುಪಿ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಬೈಂದೂರು ತಾಲೂಕು ಹೇರೂರು ಗ್ರಾಮದ ರಾಗಿಹಕ್ಲು ಕಟ್ಕೇರಿ ನಿವಾಸಿ ಹೆಚ್ ಶೇಖರ್ ಗೌಡ (40) ಎಂಬ ವ್ಯಕ್ತಿಯು ಮೇ 5 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.

5 ಅಡಿ 2 ಇಂಚು ಎತ್ತರ, ಕೋಲು ಮುಖ, ಎಣ್ಣೆಗಪ್ಪು ಮೈಬಣ್ಣ, ಸಾಧರಣ ಶರೀರ ಹೊಂದಿದ್ದು, ಕನ್ನಡ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬೈಂದೂರು ಪೊಲೀಸ್ ಠಾಣೆಯ ಉಪನಿರೀಕ್ಷಕರು ದೂ.ಸಂಖ್ಯೆ: 08254-251033 ಅಥವಾ ಬೈಂದೂರು ವೃತ್ತ ನಿರೀಕ್ಷಕರು ದೂ.ಸಂಖ್ಯೆ: 08254-251031 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೈಂದೂರು ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ

Latest Indian news

Popular Stories