ಉಡುಪಿ: ವೆಲ್ಫೇರ್ ಸೊಸೈಟಿಯ ವಾರ್ಷಿಕ ಮಹಾಸಭೆ

ಉಡುಪಿ:ಇಸ್ಲಾಮಿಕ್ ವೆಲ್ಫೇರ್ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ನಿ. ಉಡುಪಿ ಇದರ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 21 ರಂದು ಉಡುಪಿ ಜಾಮಿಯಾ ಮಸೀದಿಯ ನೆಲ ಅಂತಸ್ತಿನಲ್ಲಿ ನಡೆಯಿತು.

ಸೊಸೈಟಿಯ ಅಧ್ಯಕ್ಷರಾದ ರಿಯಾಝ್ ಅಹ್ಮದ್ ಕುಕ್ಕಿಕಟ್ಟೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮಲ್ಪೆ ಜಾಮಿಯಾ ಮಸೀದಿಯ ಖತೀಬರಾದ ಇಮ್ರಾನುಲ್ಲಾ ಖಾನ್ ಮನ್ಸೂರಿ ಹಾಗೂ ಮಣಿಪಾಲ ಎಂ.ಐ.ಟಿ ಇದರ ಸಹಾಯಕ ಪ್ರಾಧ್ಯಾಪಕರಾದ ಡಾ| ಅಬ್ದುಲ್ ಅಝೀಝ್ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಉಡುಪಿ ಜಾಮಿಯಾ ಮಸೀದಿಯ ಅಧ್ಯಕ್ಷರಾದ ರಿಯಾಝ್ ಅಹ್ಮದ್, ವೆಲ್ಫೇರ್ ಸೊಸೈಟಿಯ ಉಪಾಧ್ಯಕ್ಷರಾದ ನಿಸಾರ್ ಅಹ್ಮದ್, ಕಾರ್ಯದರ್ಶಿ ಆರಿಫ್ ಕಾಶಿಂ ಮತ್ತು ಸಲಹೆಗಾರರಾದ ನರಸಿಂಹ ಸ್ವಾಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಾಫಿಝ್ ಯೂನುಸ್ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಿರ್ದೇಶಕರಾದ ಜಿ. ಶುಐಬ್ ಅಹ್ಮದ್ ಮಲ್ಪೆ ಸ್ವಾಗತಿಸಿದರು. ರಯೀಸ್ ಅಹ್ಮದ್ ಆಮಂತ್ರಣ ಪತ್ರಿಕೆ ಓದಿ ದಾಖಲಿಸಿದರು. ಅನ್ವರ್ ಅಲಿ ಕಾಪು ವಾರ್ಷಿಕ ವರದಿಯನ್ನು ಓದಿದರು. ಇಕ್ಬಾಲ್ ಕಾಪು ಕೊನೆಯಲ್ಲಿ ಧನ್ಯವಾದವಿತ್ತರು. ಜಿ.ಎಂ. ಶರೀಫ್ ಹೂಡೆ ಕಾರ್ಯಕ್ರಮ ನಿರೂಪಿಸಿದರು.

Latest Indian news

Popular Stories