ಬ್ರಹ್ಮಾವರ ಹಲುವಳ್ಳಿಯ ಮಹಿಳೆ ನಾಪತ್ತೆ

ಬ್ರಹ್ಮಾವರ ಪೋಲೀಸ್ ಠಾಣಾ ವ್ಯಾಪ್ತಿಯ ಹಲುವಳ್ಳಿ ಸಮೀಪದ ಕೊಂಟಿಬೈಲು ನಿವಾಸಿ ಸುಜಾತ ಶೆಟ್ಟಿ (39) ಎಂಬ ಮಹಿಳೆಯು ಕಳೆದ 7 ದಿನಗಳ ಹಿಂದೆ ಮನೆ ಬಿಟ್ಟು ಹೋದವರು ಮನೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಮಹಿಳೆಯು ಸುಮಾರು 16 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು , ಈ ಹಿಂದೆಯೂ ಹಲವು ಬಾರಿ ಮನೆ ಬಿಟ್ಟು ಹೋಗಿದ್ದು , ಪರಿಚಯಸ್ಥರು , ಸಂಬಂಧಿಕರ ಮನೆಯಲ್ಲಿ ಉಳಿದು 2 ಅಥವಾ 3 ದಿನಗಳಲ್ಲಿ ತಮ್ಮ ಮನೆಗೆ ಹಿಂದಿರುಗುತ್ತಿದ್ದರು.

ಆದರೆ ಮೇ 24 ರಂದು ಸಂಜೆ ವೇಳೆಗೆ ಮನೆಯಿಂದ ಹೊರಟ ಇವರು ಈವರೆಗೂ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದಾರೆ. ಮನೆಯಿಂದ ಹೊರಡುವಾಗ ಕಂದು ಬಿಳಿ ಬಣ್ಣದ ಚೂಡಿದಾರ , ಕಂದು ಬಣ್ಣದ ಪ್ಯಾಂಟ್ ಧರಿಸಿದ್ದು , ಕಾಲಿನಲ್ಲಿ ಕತ್ತಿಯ ಗಾಯದ ಗುರುತು ಇದೆ.

ಈ ಮಹಿಳೆಯನ್ನು ಎಲ್ಲಾದರೂ ಕಂಡಲ್ಲಿ ಅಥವಾ ಇವರ ಬಗ್ಗೆ ಮಾಹಿತಿ ಇದ್ದಲ್ಲಿ ಈಶ್ವರ್ ಮಲ್ಪೆ 9663434415 ಅಥವಾ ಬ್ರಹ್ಮಾವರ ಪೋಲೀಸ್ ಠಾಣೆ 0820-2561044 ಅಥವಾ 9741104618 ಈ ಸಂಖ್ಯೆಯನ್ನು ಸಂಪರ್ಕಿಸಬೇಕಾಗಿ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ವಿನಂತಿಸಿಕೊಳ್ಳುತ್ತಿದೆ.

Latest Indian news

Popular Stories