Udupi
ವೆಲ್ಫೇರ್ ಪಾರ್ಟಿ ಪಡುತೋನ್ಸೆ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ನಕ್ವಾ, ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಕಿದೆವರ್, ಮಮ್ತಾಝ್ ಬೇಗಮ್ ಆಯ್ಕೆ

ಉಡುಪಿ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಡುತೋನ್ಸೆ ಗ್ರಾಮ ಸಮಿತಿಯ ಚುನಾವಣೆಯು ಜಿಲ್ಲಾಧ್ಯಕ್ಷರಾದ ಅಬ್ದುಲ್ ಅಝೀಜ್ ಉದ್ಯಾವರ ಅವರ ನೇತೃತ್ವದಲ್ಲಿ ಹೂಡೆಯ ಎಐಸಿ ಸಭಾಂಗಣದಲ್ಲಿ ನಡೆಯಿತು.
ಅಬ್ದುಲ್ ರಝಾಕ್ ನಕ್ವಾ ಅವರನ್ನು ಅಧ್ಯಕ್ಷರಾಗಿ ಇಸ್ಮಾಯಿಲ್ ಕಿದೆವರ್, ಮಾಮ್ತಾಝ್ ಬೇಗಮ್ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿಗಳಾಗಿ ಯಾಸೀನ್, ಅಫ್ವಾನ್ ಬಿ ಹೂಡೆ, ಫಹೀಮ್ ಅಬ್ದುಲ್ಲಾ, ಖಜಾಂಚಿಯಾಗಿ ಅಸ್ಲಮ್ ಹೈಕಾಡಿ ಆಯ್ಕೆಗೊಂಡರು. ಈ ಸಂದರ್ಭದಲ್ಲಿ ವಾರ್ಡ್ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.