ಉತ್ತರ ಕನ್ನಡದಲ್ಲಿ ಶೇ.76.53 ರಷ್ಟು ಮತದಾನ

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 76.53 ರಷ್ಟು ಮತದಾನವಾಗಿತ್ತು‌. ಜಿಲ್ಲಾ ಚುನಾವಣಾಧಿಕಾರಿ ಮಾಹಿತಿ ನೀಡಿದ್ದು, 12,56,027 ಜನ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಶಿರಸಿ ಯಲ್ಲಿ 80.48 ,ಯಲ್ಲಾಪುರ 79.96, ಕಾರವಾರ 73.63, ಹಳಿಯಾಳ 75.91 , ಕುಮಟಾ 76.93 , ಖಾನಾಪುರ 73.85 , ಭಟ್ಕಳ 76, ಕಿತ್ತೂರು ನಲ್ಲಿ 76.27 ರಷ್ಟು ಮತದಾನವಾಗಿದೆ.

ಕಳೆದ ಲೋಕಸಭಾ ಚುನಾವಣಾ 2019 ರಲ್ಲಿ ಶೇ. 74.16 ರಷ್ಟು ಮತದಾನವಾಗಿತ್ತು‌. ನೋಟಾಕ್ಕೆ 16000 ಮತ ಬಿದ್ದಿದ್ದವು.
ಬಿಜೆಪಿ ಅಭ್ಯರ್ಥಿ ಅನಂತ ಕುಮಾರ್ ಹೆಗಡೆ 7,86,042 ಮತಗಳಿಸಿ ಗೆದ್ದಿದ್ದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆನಂದ್ ಅಸ್ನೋಟಿಕರ್ 3, 06, 393 ಮತ ಗಳಿಸಿ ಎರಡನೇ ಸ್ಥಾನದಲ್ಲಿ ನಿಂತಿದ್ದರು. ಗೆಲುವಿನ ಅಂತರ 4, 79, 649 ಮತಗಳಾಗಿತ್ತು. ಆಗ 15,52,483 ಮತದಾರರು ಇದ್ದು, ಈ ಪೈಕಿ ಶೇ.74 ರಷ್ಟು ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದರು.

ಈ ಸಲ 2024 ರಲ್ಲಿ ಮತದಾನ ಪ್ರಮಾಣ ಹೆಚ್ಚಾಗಿದೆ. ಕುಮಟಾದ ಎ.ವಿ. ಬಾಳಿಗಾ ಕಾಲೇಜಿನಲ್ಲಿ ಮತ ಯಂತ್ರಗಳನ್ನು ಸುಭದ್ರವಾಗಿ ಇಡಲಾಗಿದೆ. ಅಭ್ಯರ್ಥಿಗಳ‌ ಭವಿಷ್ಯ ಈಗ ಮತಯಂತ್ರಗಳಲ್ಲಿ ಅಡಗಿದೆ. ಕಾಂಗ್ರೆಸ್ -ಬಿಜೆಪಿ ಅಭ್ಯರ್ಥಿ ಮಧ್ಯೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಜೂ.4 ರಂದು ಮತ ಎಣಿಕೆ ನಡೆಯಲಿದೆ.
…..

Latest Indian news

Popular Stories