ಸೋತರೂ ಸಮಾಧಾನಕರ ಮತ ಗಳಿಸಿದ‌ ಅಂಜಲಿ ನಿಂಬಾಳ್ಕರ್

ಕಾರವಾರ : ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಇತಿಹಾಸದಲ್ಲಿ (1951 ರಿಂದ 2024) ಈ ಸಲ ಅತಿ ಹೆಚ್ಚು ಮತ ಗಳಿಕೆ ಮಾಡುವ ಮೂಲಕ ಕಾಂಗ್ರೆಸ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

ಈ ಬಾರಿ ಲೋಕಸಭಾ ಚುನಾವಣಾ ಕಣದಲ್ಲಿ ಸೋತರೂ ಸಹ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ 4,45, 067 ಲಕ್ಷ ಮತಗಳನ್ನು ಪಡೆಯುವ ಮೂಲಕ ಅತಿ ಹೆಚ್ಚು ಮತ ಕಾಂಗ್ರೆಸ್ ಪಕ್ಷಕ್ಕೆ ತಂದುಕೊಟ್ಟ ಅಭ್ಯರ್ಥಿ ಎನಿಸಿದ್ದಾರೆ.

ಕಳೆದ ಬಾರಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಆನಂದ್ ಅಸ್ನೋಟಿಕರ್ 3, 06, 393 ಲಕ್ಷ ಮತಗಳನ್ನು ಪಡೆದಿದ್ದರು.

2014 ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರಶಾಂತ ದೇಶಪಾಂಡೆ 4,06,116 ಮತಗಳನ್ನ ಪಡೆದಿದ್ದರು‌. 2009 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾರ್ಗರೇಟ್ ಆಳ್ವಾ 3,16,531 ಲಕ್ಷ ಮತ ಪಡೆದಿದ್ದರು.

2004 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾರ್ಗರೆಟ್ ಆಳ್ವಾ 2,60,948 ಲಕ್ಷ ಮತ ಪಡೆದಿದ್ದರು. 1999 ರ ಚುನಾವಣೆಯಲ್ಲಿ ಆಳ್ವಾ 3,56,246. ಮತ ಪಡೆದು ಆಯ್ಕೆ ಸಹ ಆಗಿದ್ದರು.

1998 ರ ಚುನಾವಣೆಯಲ್ಲಿ ಆಳ್ವಾ 2,76,004 ಲಕ್ಷ ಮತ ಪಡೆದಿದ್ದರು. 1996 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಆರ್ ಎನ್ ನಾಯ್ಕ ಕೇವಲ 88,609 ಮತಗಳನ್ನ ಮಾತ್ರ ಪಡೆದಿದ್ದರೆ, 1991 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ದೇವರಾಯ ನಾಯ್ಕ 1,71,436 ಮತ ಪಡೆದಿದ್ದರು.

ಉಳಿದಂತೆ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ 3 ಲಕ್ಷ ಮತಗಳನ್ನ ದಾಟಿಲ್ಲ. ಆದರೆ ಈ ಬಾರಿ 4 , 45, 067 ಲಕ್ಷ ಮತ ಪಡೆಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಅತೀ ಹೆಚ್ಚು ಮತ ಗಳಿಕೆ ಮಾಡಿದ ಚುನಾವಣೆ ಇದಾಗಿದೆ.
…….

Latest Indian news

Popular Stories