ಕಾರವಾರ : ಕುಮಟಾ ಶಾಸಕ ದಿನಕರ ಶೆಟ್ಟಿ ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡ ಘಟನೆ ಇಂದು ನಡೆದಿದೆ.ಕುಮಟಾದ ಕೊಪ್ಪಳಕರವಾಡಿ ವಾರ್ಡ್ ನಲ್ಲಿ ಇರುವ ಸಹೋದರನ ಮನೆಯಲ್ಲಿ ಈ ಘಟನೆ ನಡೆದಿದ್ದು, ಹೆಚ್ಚಿನ ಅನಾಹುತವಾಗಿಲ್ಲ.
ಶಾಸಕ ದಿನಕರ ಶೆಟ್ಟಿ ಸಹೋದರ ಮಧುಕರ ಶೆಟ್ಟಿ ಅವರ ಮನೆಯಲ್ಲಿ ಗ್ಯಾಸ್ ಲೀಕ್ ಆಗಿ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಮನೆಯಲ್ಲಿ ಯಾರು ಇರಲಿಲ್ಲ ಎನ್ನಲಾಗಿದೆ. ಬೆಂಕಿ ಹೊಗೆ ಕಂಡು ಮನೆಯ ಬಾಗಿಲು ತೆರೆಯುತ್ತಿದ್ದಂತೆ ಸಿಲೆಂಡರ್ ಸ್ಫೊಟವಾಗಿದೆ.
ಸಿಲಿಂಡರ್ ಸ್ಪೋಟಕ್ಕೆ ಬೆಚ್ಚಿಬಿದ್ದ ಮಧುಕರ ಶೆಟ್ಟಿ ಪತ್ನಿ ಲತಾ ಶೆಟ್ಟಿ ಸಣ್ಣ ಪುಟ್ಟ ಗಾಯಗಳಾಗಿವೆ.
ಸ್ಪೋಟ ಭಯಾನಕ ಶಬ್ಧಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.ಸಿಲಿಂಡರ್ ಸ್ಪೋಟದಿಂದ ಮನೆಯ ಒಳಭಾಗ ಹೊತ್ತಿ ಉರಿದಿದೆ.ಮನೆಯಲ್ಲಿದ್ದ ಪೀಠೋಪಕರಣ, ಟಿ.ವಿ ಸೇರಿ ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿ ಬೆಂಕಿಗೆ ಆಹುತಿಯಾಗಿದೆ.
ಈ ಘಟನೆಯಲ್ಲಿ ಲತಾ ಶೆಟ್ಟಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಸ್ಥಳಕ್ಕೆ ಕುಮಟಾ ಪೊಲೀಸರು ಹಾಗೂ ಅಗ್ನಿಶಾಮಕ ದಳಸ ಸಿಬ್ಬಂದಿ ಭೇಟಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.
…..