ಬಸ್ ನಲ್ಲಿ ಪ್ರಯಾಣಿಕನಿಗೆ ಹೃದಯಾಘಾತ: ಚಾಲಕನ ಪ್ರಯತ್ನಕ್ಕೆ ಸಿಗದ ಯಶಸ್ಸು

ಕಾರವಾರ: ಬಸ್ ನಲ್ಲಿ ಪ್ರಯಾಣಿಕನಿಗೆ ಹೃದಯಾಘಾತವಾದದ್ದು ಕಂಡು, ಬಸ್ ಚಾಲಕ ಬಸ್ ನ್ನು ಸೀದಾ ಆಸ್ಪತ್ರೆಗೆ ತಂದು, ಪ್ರಯಾಣಿಕನಿಗೆ ಚಿಕಿತ್ಸೆ ಕೊಡಿಸಿದರೂ, ಪ್ರಯಾಣಿಕ ಬದುಕಿ ಉಳಿಯಲಿಲ್ಲ.

ಈ ಘಟನೆ ನಡೆದದ್ದು ಹೊನ್ನಾವರದಲ್ಲಿ. ಬಸ್ ಹೊನ್ನಾವರ ದಿಂದ ಗೇರುಸೊಪ್ಪೆಗೆ ತೆರಳುತ್ತಿತ್ತು. ಹಡಿನಬಾಳದಲ್ಲಿ ಕೃಷ್ಣಾ ಶೆಟ್ಟಿ( 65) ಬಸ್ ಹತ್ತಿದರು. ಅವರು ಗೇರುಸೊಪ್ಪಗೆ ತೆರಳಲು
ಹಡಿನಬಾಳದಲ್ಲಿ ಬಸ್ ಹತ್ತಿದ್ದರು . ಬಸ್ ಚಲಿಸುತ್ತಿರುವಾಗ ಮಾರ್ಗದಲ್ಲಿ ಪ್ರಯಾಣಿಕ ಕೃಷ್ಣ ಶೆಟ್ಟಿ ಅವರಿಗೆ ಹೃದಯಾಘಾತವಾಯಿತು‌. ತಡ ಮಾಡದ ಚಾಲಕ ಬಸ್ ನನ್ನು ಹೊನ್ನಾವರ ಕಡೆ ತಿರುಗಿಸಿ, ಸರ್ಕಾರಿ ಆಸ್ಪತ್ರೆಗೆ ಕರೆತಂದರು‌ .

ಚಾಲಕ ಮೋಹನ್ ನಾಯ್ಕ ಸಮಯ ಪ್ರಜ್ಞೆ ಬಳಸಿ, ಪ್ರಯಾಣಿಕನ ಜೀವ ಉಳಿಸಲು ಯತ್ನಿಸಿದರು. ಆದರೆ ಪ್ರಯಾಣಿಕ ಕೃಷ್ಣ ಶೆಟ್ಟಿ ವೈದ್ಯರ ಪ್ರಯತ್ನದ ನಂತರ ಬದುಕಿ ಉಳಿಯಲಿಲ್ಲ. ಇದರಿಂದ ಚಾಲಕನಿಗೆ ‌ನಿರಾಶೆಯಾಯಿತು‌ . ತನ್ನ ಪ್ರಯತ್ನಕ್ಕೆ ಯಶಸ್ಸು ಸಿಗಲಿಲ್ಲ ಎಂದು ಬೇಸರಗೊಂಡರು‌ .ಪ್ರಯಾಣಿಕರು ಬಸ್ ಚಾಲಕನ ಮಾನವೀಯತೆ ಕೊಂಡಾಡಿದರು‌ .
….

Latest Indian news

Popular Stories