
Uttara Kannada
ಮರ ತೆರವಿನ ವೇಳೆ -ದಿಲೀಪ್ ಕಾಂಪ್ಲೆಕ್ಸ್ ಗೆ ಹಾನಿ
ಕಾಂಪ್ಲೆಕ್ಸ್ ಗೆ ಕತ್ತರಿಸಿದ ಮರದ ಕೊಂಬೆ ತಾಗಿದ್ದು ಮೇಲಿನ ಶೀಟ್, ಕಿಡಕಿಯ ಗಾಜು ಹಾವೂ ಗ್ರಿಲ್ಸ್ ಸೇರಿದಂತೆ ಕಟ್ಟಡದ ವಿವಿಧೆಡೆ ಹಾನಿಯಾಗಿದೆ
ಕಾರವಾರ : ನಗರಸಭೆಯ ವತಿಯಿಂದ ನಗರದಲ್ಲಿನ ಅಪಾಯಕಾರಿ ಮರಗಳನ್ನು ತೆರವುಗೊಳಿಸುತ್ತುದ್ದು ಬುಧವಾರ ಇಲ್ಲಿನ ಸವಿತಾ ವೃತ್ತದ ದಿಲೀಪ್ ಕಾಂಪ್ಲೆಕ್ಸ್ ಬಳಿ ಮರ ತೆರವಿನ ವೇಳೆ ಸೂಕ್ತ ಮುಂಜಾಗೃತೆ ಇಲ್ಲದೇ ಕಾಂಪ್ಲೆಕ್ಸ್ ಗೆ ಹಾನಿಯಾಗಿದೆ.
ಕಾಂಪ್ಲೆಕ್ಸ್ ಗೆ ಕತ್ತರಿಸಿದ ಮರದ ಕೊಂಬೆ ತಾಗಿದ್ದು ಮೇಲಿನ ಶೀಟ್, ಕಿಡಕಿಯ ಗಾಜು ಹಾವೂ ಗ್ರಿಲ್ಸ್ ಸೇರಿದಂತೆ ಕಟ್ಟಡದ ವಿವಿಧೆಡೆ ಹಾನಿಯಾಗಿದೆ. ಇದರಿಂದ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ.
ಅರಣ್ಯ ಇಲಾಖೆ ಸೂಚನೆಯಂತೆ ನಗರ ವ್ಯಾಪ್ತಿಯ 18 ಮರಗಳ ಕೊಂಬೆ ಮಾತ್ರ ತೆರವುಗೊಳಿಸಲು ಅನುಮತಿ ನೀಡಲಾಗಿದ್ದರೂ, ಕೆಲಸದ ವೇಳೆ ಸೂಕ್ತ ಮುಂಜಾಗೃತಾ ಕ್ರಮ ವಹಿಸಿಲ್ಲ. ಇದರಿಂದ ಕಾಂಪ್ಲೆಕ್ಸ್ ಗೆ ಹಾನಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಟ್ಟಡದ ಮಾಲೀಕರು ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ನಗರಸಭೆ ಅಪಾಯಕಾರಿ ಮರಗಳ ವಿವರ ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದು, ಮುಂದಿನ ಕಾರ್ಯಚರಣೆಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಜನರು ಒತ್ತಾಯಿಸಿದ್ದಾರೆ.




