ದಾಂಡೇಲಿ- ಹಳಿಯಾಳದಲ್ಲಿ ಗುಡುಗು ಮಿಂಚು ಸಹಿತ‌ ಮಳೆ

ಕಾರವಾರ : ದಾಂಡೇಲಿ- ಹಳಿಯಾಳದಲ್ಲಿ ಗುಡುಗು ಮಿಂಚು ಸಹಿತ‌ ಮಳೆಯಾಗಿದೆ. ಸಂಜೆ ೪ ಗಂಟೆಯಿಂದ ಸತತ ಒಂದು ತಾಸು ಭಾರೀ ಮಳೆ ಸುರಿದಿದೆ‌ . ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ದಾಂಡೇಲಿ, ಹಳಿಯಾಳ ಜನತೆ , ಗ್ರಾಮಾಂತರ ಭಾಗದ ಜನ ಹಾಗೂ ಪಟ್ಟಣದ ಜನತೆ ಮಳೆಯನ್ನು ಸಂಭ್ರಮಿಸಿದರು.
ಎಪ್ರಿಲ್ ನಲ್ಲಿ ಬಿದ್ದ‌ ಒಂದು ಮಳೆಯ ನಂತರ ಮೇ ೧೧ ರಂದು ದಾಂಡೇಲಿ ಮಳೆಯ ಸ್ಪರ್ಶ ಪಡೆಯಿತು.‌ ಜನತೆ ಹಾಗೂ ದಟ್ಟ ಅರಣ್ಯದ ಕಾಡು ಪ್ರಾಣಿಗಳು ಮಳೆಯಿಂದ ಕೊಂಚ ನೆಮ್ಮದಿ ಕಾಣುವಂತಾಗಿದೆ.

ಪ್ರವಾಸಿಗರಿಗೂ ಸಹ ಮಳೆ ಹಿತ‌ ಸಿಂಚನ ನೀಡಿತು‌‌.ಗಾಳಿ ಜೋರಾದ ಕಾರಣ ವಿದ್ಯುತ್ ತಂತಿ ಕೆಲ ಭಾಗದಲ್ಲಿ ತುಂಡಾಗಿ ವಿದ್ಯುತ್ ವ್ಯತ್ಯಯ ಸಹ ಆಗಿದೆ. ಸಂಜೆ ಮಳೆ ಬರುವಾಗ ಹೋದ ವಿದ್ಯುತ್ ರಾತ್ರಿ 8 ಗಂಟೆಯಾದರೂ ಬಂದಿರಲಿಲ್ಲ‌ . ಕೆಪಿಟಿಸಿಎಲ್ ಸಿಬ್ಬಂದಿ ತುಂಡಾದ ವಿದ್ಯುತ್ ತಂತಿ ಸರಿಪಡಿಸಲು ಶ್ರಮಿಸುತ್ತಿದ್ದು, ರಾತ್ರಿ ಹನ್ನೊಂದು ಗಂಟೆಗೆ ವಿದ್ಯುತ್ ಪೂರೈಕೆ ಸಾಧ್ಯವಾಗಬಹುದು ಎಂದು ಹೆಸ್ಕಾಂ ಮೂಲಗಳು ಹೇಳಿವೆ. ಪ್ರತಿವಾರ ಮೆಂಟೇನೆನನ್ಸಗಾಗಿ ನಾಲ್ಕಾರು ಗಂಟೆ ಟ್ರೀ ಕಟಿಂಗ್, ಟ್ರಾನ್ಸಫರ್ ರಿಪೇರಿ, ವಯರ್ ಮಾರ್ಗ ರಿಪೇರಿ ಮಾಡಿದರೂ, ಮೊದಲ ಮಳೆಯ ಗಾಳಿಗೆ ವಿದ್ಯುತ್ ಕೈಕೊಟ್ಟದ್ದಕ್ಕೆ ಸಾರ್ವಜನಿಕರು ಹೆಸ್ಕಾಂ ಸಿಬ್ಬಂದಿ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್ ಗೆ ಮನಸ್ಸಿನಲ್ಲೇ ಹಿಡಿಶಾಪ ಹಾಕಿದರು. ಕೆಲವರು ದೂರವಾಣಿ ಕರೆ‌ಮಾಡಿ ವಿದ್ಯುತ್ ಎಷ್ಟೊತ್ತಿಗೆ ಬರಲಿದೆ ಎಂದು ವಿಚಾರಿಸಿದರು.

Latest Indian news

Popular Stories