ಸಂಭಾವ್ಯ ಕುಡಿಯುವ ನೀರು ಬಿಕ್ಕಟ್ಟಿನ ಸಾಧ್ಯತೆ | ತುರ್ತು ಕಾರ್ಯಾಚರಣೆ ಕೇಂದ್ರ ಪ್ರಾರಂಭ

ಕಾರವಾರ : ನೈಋತ್ಯ ಮಾನ್ಸೂನ್ ವೈಫಲ್ಯದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ, ಹೊನ್ನಾವರ ತಾಲ್ಲೂಕು ಹೊರತುಪಡಿಸಿ ಉಳಿದ 11 ತಾಲೂಕುಗಳನ್ನು ರಾಜ್ಯ ಸರ್ಕಾರವು ಬರಗಾಲದ ತಾಲ್ಲೂಕುಗಳಾಗಿ ಘೋಷಿಸಿದ್ದು, ಈ ಪ್ರದೇಶದಲ್ಲಿ ಸಂಭಾವ್ಯ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಈ ಸಂದಿಗ್ಧ ಪರಿಸ್ಥಿತಿಗೆ ಸ್ಪಂದಿಸಿ ಉತ್ತರ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ಸಂತ್ರಸ್ತ ನಿವಾಸಿಗಳಿಗೆ ಅಗತ್ಯ ನೆರವು ನೀಡಲು 247 ನಿಯಂತ್ರಣ ಕೊಠಡಿಯನ್ನು ಸಕ್ರಿಯಗೊಳಿಸಲಾಗಿದ್ದು, ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ (UKDEOC) ಈಗ ಕಾರ್ಯನಿರ್ವಹಿಸುತ್ತಿದೆ.

ಬಾಧಿತ ವ್ಯಕ್ತಿಗಳು ತಕ್ಷಣದ ಸಹಾಯಕ್ಕಾಗಿ ಉತ್ತರ ಕನ್ನಡ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರವನ್ನು (UKDEOC) ಈ ಟೋಲ್-ಫ್ರೀ ಸಹಾಯವಾಣಿ: 1077 • WhatsApp: +91 9483511015 ಮೂಲಕ ಸಂಪರ್ಕಿಸಲು ಕೋರಲಾಗಿದೆ.

ಬರಗಾಲದಿಂದ ಆಗಿರುವ ತೊಂದರೆಗಳನ್ನು ನಿವಾರಿಸಲು ಎಲ್ಲ ಪೂರ್ವತಯಾರಿಯನ್ನು ಜಿಲ್ಲಾಡಳಿತ ಮಾಡಲಾಗಿದ್ದು . ಈ ಬಿಕ್ಕಟ್ಟಿನ ಪರಿಣಾಮವನ್ನು ತಗ್ಗಿಸುವಲ್ಲಿ ಸಮುದಾಯದಿಂದ ತ್ವರಿತ ಕ್ರಮ ಮತ್ತು ಸಹಕಾರ ಜಿಲ್ಲಾಡಳಿತಕ್ಕೆ ಅತ್ಯಗತ್ಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

ಉಷ್ಣಾಂಶ ಹೆಚ್ಚಳ ಮುನ್ನೆಚ್ಚರಿಕೆ ವಹಿಸಿ : ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ : ಭಾರತೀಯ ಹವಾಮಾನ ಇಲಾಖೆಯು 2024 ರ ಮಾರ್ಚ್ ನಿಂದ ಮೇ ತಿಂಗಳವರೆಗಿನ ಉಷ್ಣತೆ ಮತ್ತು ಮಳೆಯ ದೀರ್ಘಾವಧಿ ಮುನ್ಸೂಚನೆಯನ್ನು ಮಾರ್ಚ್ 1, 2024 ರಂದು ಬಿಡುಗಡೆ ಮಾಡಿದ್ದು, ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ (ಜೊಯ್ದಾ ತಾಲ್ಲೂಕಿನ ಕೆಲವು ಭಾಗಗಳನ್ನು ಹೊರತುಪಡಿಸಿ) ಸಾಮಾನ್ಯಕ್ಕಿಂತ ಹೆಚ್ಚಿನ ಉಷ್ಣತೆಯನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಸೂಚಿಸಲಾಗಿದೆ.
ಈ ಹೆಚ್ಚಿನ ಉಷ್ಣತೆಯು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಮತ್ತು ಅಗ್ನಿ ಅವಘಡಗಳ ಅಪಾಯವನ್ನು ಹೆಚ್ಚಿಸಬಹುದಾಗಿದ್ದು, ಈ ನಿಟ್ಟಿನಲ್ಲಿ, ಉತ್ತರ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಿರುತ್ತದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಹೇಳಿದ್ದಾರೆ.

ದೇಹದ ನೀರಿನಂಶ ಕಾಯ್ದುಕೊಳ್ಳಿ:
ಬಿಸಿಲಿನ ಉತ್ತುಂಗ ಸಮಯದಲ್ಲಿ ಹೊರಗೆ ಹೋಗುವುದನ್ನು ಕಡಿಮೆ ಮಾಡಿ ಮತ್ತು ಸಾಕಷ್ಟು ನೀರು ಕುಡಿಯಿರಿ, ತಂಪು ಪಾನೀಯಗಳಿಗಿಂತ ನೀರನ್ನು ಆಯ್ಕೆ ಮಾಡಿ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದ್ದಾರೆ.

ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯಿರಿ:

ಬಿಸಿಲಿನ ಸಮಯದಲ್ಲಿ ಹೊರಗೆ ಹೋಗಬೇಕಾದರೆ, ಟೊಪ್ಪಿ, ಸನ್‌ಸ್ಟೀನ್ ಲೋಷನ್, ಮತ್ತು ಸೂರ್ಯನ ಕಿರಣಗಳನ್ನು ತಡೆಯುವಂತಹ ಬಟ್ಟೆಗಳನ್ನು ಧರಿಸಿ. ಆರೋಗ್ಯದ ಮೇಲೆ ನಿಗಾ ವಹಿಸಿ ಎಂದು ಹೇಳಿದ್ದಾರೆ.‌
ಅತಿಯಾದ ಬೆವರುವಿಕೆ, ಆಯಾಸ, ಮತ್ತು ತಲೆತಿರುಗುವಿಕೆಯಂತಹ ಲಕ್ಷಣಗಳಿಗೆ ಗಮನ ಕೊಡಿ. ಈ ಲಕ್ಷಣಗಳು ಕಂಡು ಬಂದರೆ , ತಕ್ಷಣ ವೈದ್ಯಕೀಯ ಸಹಾಯ ಪಡೆಯಿರಿ.

ಅಗ್ನಿ ಅವಘಡಗಳನ್ನು ತಡೆಯಿರಿ: ಸುಟ್ಟುಗುಂಟೆಗಳನ್ನು ಎಚ್ಚರವಾಗಿ ನಂದಿಸಿ ಮತ್ತು ತೆರೆದ ಪ್ರದೇಶಗಳಲ್ಲಿ ಬೆಂಕಿ ಹಚ್ಚದಿರಿ. ಶಾರ್ಟ್ ಸರ್ಕ್ಯುಟ್‌ಗಳನ್ನು ತಡೆಯಲು ವಿದ್ಯುತ್ ಉಪಕರಣಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿ.
ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಚಿತ ಸಹಾಯವಾಣಿ ಸಂಖ್ಯೆ 1077/ 9483511015 ಗೆ ಕರೆ ಮಾಡುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.
…..‌

Latest Indian news

Popular Stories