ಹಳಿ ದಾಟುವಾಗ ರೈಲು ಡಿಕ್ಕಿಯಾಗಿ ನಾಲ್ವರು ಮೃತ್ಯು

ರಾಂಚಿ :ಜಾರ್ಖಂಡ್ ನ ಗಮರಿಯಾದಲ್ಲಿ ಹಳಿ ದಾಟುವಾಗ ಉತ್ಕಲ್ ಎಕ್ಸ್‌ ಪ್ರೆಸ್‌ ರೈಲು ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿದ್ದಾರೆ.

ಜಾರ್ಖಂಡ್‌ ನ ಸೆರೈಕೆಲಾ-ಖಾರ್ಸ್ವಾನ್ ಜಿಲ್ಲೆಯ ಗಮಾರಿಯಾ ನಿಲ್ದಾಣದ ಬಳಿ ಗುರುವಾರ ಸಂಜೆ ಈ ಘಟನೆ ನಡೆದಿದೆ.
ಪುರಿಗೆ ಹೊರಟಿದ್ದ ಉತ್ಕಲ್ ಎಕ್ಸ್‌ ಪ್ರೆಸ್‌ ಗೆ ಡಿಕ್ಕಿ ಹೊಡೆದು ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆಇವರು ಹತ್ತಿರದ ಸ್ಲಮ್‌ ನ ನಿವಾಸಿಗಳು ಎನ್ನಲಾಗಿದೆ.

ಸರಿಸುಮಾರು ಸಂಜೆ 6:55 ಕ್ಕೆ ರೈಲ್ವೆ ಹಳಿಗಳನ್ನು ದಾಟುತ್ತಿದ್ದಾಗ ರೈಲು ಡಿಕ್ಕಿ ಹೊಡೆದಿದೆ. ಸ್ಥಳೀಯ ಪೊಲೀಸ್ ಮತ್ತು ರೈಲ್ವೇ ರಕ್ಷಣಾ ಪಡೆ(ಆರ್‌ಪಿಎಫ್) ತುರ್ತು ಸ್ಪಂದನಾ ತಂಡಗಳು ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿವೆ

Latest Indian news

Popular Stories