ಕಾರವಾರದಲ್ಲಿ ಸಂಭ್ರಮದಿಂದ ಆಂಜನೇಯ ಜಯಂತಿ ಆಚರಣೆ:35 ಲಕ್ಷ ರೂ.ಮೊತ್ತದಬಂಗಾರದ ಕಿರೀಟ ಅರ್ಪಣೆ

ಕಾರವಾರ : ಕಾರವಾರದಲ್ಲಿ ಆಂಜನೇಯ ಜಯಂತಿಯನ್ನು ಶ್ರದ್ಧೆ ಭಕ್ತಿಯಿಂದ ಆಚರಿಸಲಾಯಿತು. 100 ವರ್ಷ ಹಳೆಯ ಮಾರುತಿ ದೇವಾಲಯದಲ್ಲಿ ಬಾಲ ಹನುಮ ಜಯಂತಿ ಆಚರಣೆಗೆ ಬೆಳಗಿಂದಲೇ ಭಕ್ತರು ಆಗಮಿಸುತ್ತಿದ್ದರು. ಬಾಲ ಹನುಮನ ಬೆಳ್ಳಿ ಮೂರ್ತಿಯನ್ನು ಗರ್ಭಗಡಿಯ ಬಾಗಿಲ ಆವರಣದಲ್ಲಿಟ್ಟು ಭಕ್ತರಿಗೆ ತೊಟ್ಟಿಲು ತೂಗಲು ಅವಕಾಶ ‌ನೀಡಲಾಯಿತು‌ .

ಈ ಸಲ ಹನುಮ ಜಯಂತಿಗೆ ಬಂಗಾರದ ಕಿರೀಟ ಅರ್ಪಣೆ ಮಾಡಲಾಯಿತು. 35 ಲಕ್ಷ ರೂ. ಮೊತ್ತದ ಬಂಗಾರದ ಕಿರೀಟ ಅರ್ಪಣೆ ಮಾಡಲಾಗಿದ್ದು, ಇದು ದೇವಸ್ಥಾನಕ್ಕೆ ಬರುವ ಎಲ್ಲಾ ಭಕ್ತರ ಕೊಡುಗೆ ಎಂದು ದೇವಸ್ಥಾನದ ಮುಖ್ಯಸ್ಥರಲ್ಲಿ ಒಬ್ಬರಾದ ರಾಜನ್ ಮಾಪ್ಸೆಕರ್ ದಿ ಹಿಂದೂಸ್ತಾನ್ ಗೆಝಟಿಯರ್ ಗೆ ವಿವರಿಸಿದರು‌ . 1999 ಡಿಸೆಂಬರ್ 31 ರಂದು ದೇವಸ್ಥಾನದ ಪುನರುಜ್ಜೀವನ ಆಯಿತು. ಅಂದಿನಿಂದ ಪ್ರತಿ ವರ್ಷ ‌ನಡೆವ ಮಾರುತಿ ಜಾತ್ರೆಯಲ್ಲಿ ಸಂಗ್ರಹವಾದ ಹಣ ಕೂಡಿಟ್ಟು ಬ್ಯಾಂಕ್ ನಲ್ಲಿ ಠೇವಣಿ ಇಟ್ಟೆವು. ಆ ಹಣದ ಬಡ್ಡಿ ಮತ್ತು ಅಸಲು ಸೇರಿಸಿ 35 ಲಕ್ಷ ರೂ. ವೆಚ್ಚದಲ್ಲಿ ಅರ್ದ ಕೆಜಿ ಚಿನ್ನದ ಕಿರೀಟ ಮಾಡಿಸಲಾಗಿದೆ. ರಾಜಲಕ್ಷ್ಮಿ ಜುವೆಲರ್ಸ ಕಿರೀಟ ರೂಪಿಸಿದ್ದಾರೆ. ಹನುಮ ಜಯಂತಿ ಅಂದೇ ಕಿರೀಟವನ್ನು ಆಂಜನೇಯಗೆ ಅರ್ಪಿಸಲಾಗಿದೆ ಎಂದರು‌ . ಕಾರವಾರದ ಮಾರುತಿ ದೇವಸ್ಥಾನ ಪ್ರಸಿದ್ಧವಾದುದು. ಮಹಾರಾಷ್ಟ್ರ ,‌ಗೋವಾ ,ಕರ್ನಾಟಕದ ‌ಬೇರೆ‌ಬೇರೆ‌ ಭಾಗದಿಂದ ಜನರು ದೇವರ ಮೂರ್ತಿ ನೋಡಲು ಆಗಮಿಸುತ್ತಾರೆ. ಮಾರುತಿ ಜಾತ್ರೆ, ರಾಮನವಮಿ, ಶ್ರಾವಣಮಾಸದ ಕಾರ್ಯಕ್ರಮ ತಪ್ಪದೇ ಮಾಡುತ್ತಾ ಬಂದಿದ್ದೇವೆ ಎಂದು ಅವರು ವಿವರಿಸಿದರು.

ಹಗಲೀಡಿ ಹನುಮಜಯಂತಿಗೆ ಭಕ್ತರು ಆಗಮಿಸಿ ಬಾಲ ಹನುಮನ ತೊಟ್ಟಿಲು ತೂಗಿದರು‌ . ಹಾಗೂ ಹರಕೆ ಅರ್ಪಿಸಿದರು .
ಜಿಲ್ಲೆಯ ಕುಮಟಾದ ಚಂದಾವರ ಹನುಮಂತ, ದುಂಡಕುಳಿ ಹನುಮಂತ, ಭಟ್ಕಳದ ಹನುಮಂತ ‌ದೇವರ ದೇವಸ್ಥಾನ, ದಾಂಡೇಲಿ ಕೋಗಿಲಬನದ ಮಾರುತಿ ದೇವಸ್ಥಾನಗಳಲ್ಲಿ ‌ವಿಜೃಂಭಣೆಯಿಂದ ಬಾಲ ಹನುಮ ಜಯಂತಿ ಆಚರಿಸಲಾಗಿದೆ.
…….

Latest Indian news

Popular Stories