ಕಡಲತೀರದಲ್ಲಿ ರಾಶಿ ರಾಶಿ ಕಾಂಡೋಮ್ ಪಾಕೆಟ್ ಪತ್ತೆ

ಕಾರವಾರ: ಸರಕಾರಿ ಆಸ್ಪತ್ರೆಗಳಲ್ಲಿ ಸಿಗುವ ಕಾಂಡೋಮ್ ಪ್ಯಾಕೇಟ್‌ಗಳು ಕಾರವಾರ ನಗರದ ಟ್ಯಾಗೋರ್ ಕಡಲ ತೀರದಲ್ಲಿ ರಾಶಿ ರಾಶಿ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ‌.

1001263313 Uttara Kannada

ವರ್ಲ್ಡ್ ಹ್ಯೂಮನ್ ರೈಟ್ಸ್ ಆರ್ಕೆ ಫೌಂಡೇಶನ್ ಈಚೆಗೆ ಪತ್ರಿಕಾಗೋಷ್ಠಿ ಮಾಡಿ ಏಡ್ಸ ನಿಯಂತ್ರಣ ಸಂಸ್ಥೆ , ಏಡ್ಸ ಕಾಯಿಲೆ ಇರುವವರಿಗೆ ಹಾಗೂ ಸೆಕ್ಸ ವರ್ಕರ್ಸಗೆ ಕಾಂಡೋಮ್ ವಿತರಿಸುತ್ತಿಲ್ಲ ಎಂದು ಅಪಾದಿಸಿತ್ತು‌ . ಈ ಆರೋಪದ ಬಗ್ಗೆ ಏಡ್ಸ ನಿಯಂತ್ರಣ ನೋಡಲ್ ಅಧಿಕಾರಿ ಸರ್ಕಾರಕ್ಕೆ ಏಡ್ಸ ಜಾಗೃತಿ ಕ್ರಾಂತಿ ಸಂಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸಿತ್ತಿಲ್ಲ ಎಂದು ಸರ್ಕಾರಕ್ಕೆ ವರದಿ ನೀಡಿದ್ದರು.

ಈ ಘಟನೆ ಬೆನ್ನಲ್ಲೇ ಕಡಲತೀರದ ಫುಡ್ ಕೋರ್ಟ್ ಹಿಂಬದಿಯಲ್ಲಿ ಒಂದೇ ಸ್ಥಳದಲ್ಲಿ ರಾಶಿ ರಾಶಿಯಾಗಿ ಕಾಂಡೋಮ್ ಪ್ಯಾಕೆಟ್‌ಗಳು ಬಿದ್ದಿದ್ದು. ಈ ಪ್ಯಾಕೇಟಿನ ಮೇಲೆ ಗೌರ್ಮೆಂಟ್ ಆಫ್ ಇಂಡಿಯಾ ಎಂದು ನಮೂದಿಸಿದೆ.
ಏಡ್ಸ ನಿಯಂತ್ರಣ ಮತ್ತು ಚಿಕಿತ್ಸಾ ಕಚೇರಿ ಕ್ರಿಮ್ಸ ಅಧೀನ ಆಸ್ಪತ್ರೆಯಲ್ಲಿದ್ದು, ಕ್ರಿಮ್ಸ ಆಸ್ಪತ್ರೆ ಕಡಲತೀರಕ್ಕೆ ಹತ್ತಿರದಲ್ಲೇ ಇದೆ‌ ಎಂಬುದು ಗಮನಾರ್ಹ.

ಆಸ್ಪತ್ರೆಯಿಂದ ಹರಿದು ಬರುವ ನಾಲೆಯ ನೀರು ಸಮುದ್ರ ಸೇರುವೆಡೆ ಇದ್ದು , ಆಸ್ಪತ್ರೆ ಕಸದ ಜೊತೆ ನೀರು ಸಮುದ್ರ ಸೇರುತ್ತಿದೆ. ಕಾಂಡೋಮ್ಸ್ ಸಹ ಆಸ್ಪತ್ರೆ ತ್ಯಾಜ್ಯ ದೊಂದಿಗೆ ತೇಲಿ ಬಂದಿರಬಹುದೇ ಎಂದು ಶಂಕಿಸಲಾಗಿದೆ.
ಸರಕಾರಿ ಆಸ್ಪತ್ರೆಯಲ್ಲಿ ಸಿಗುವ ನಿರೋಧ್‌ಗಳು ಇಷ್ಟು ಪ್ರಮಾಣದಲ್ಲಿ ಒಂದೆಡೆ ಬಿದ್ದಿರುವುದು ಅಚ್ಚರಿ ಮೂಡಿಸಿದೆ.ಕಡಲ ತೀರದಲ್ಲಿ ಓಡಾಡುವ ಪ್ರವಾಸಿಗರು ಹಾಗೂ ಸ್ಥಳೀಯರು ಒಂದೇ ಕಡೆ ಇಷ್ಟೊಂದು ಕಾಂಡೋಮ್ ಪ್ಯಾಕೇಟ್‌ಗಳನ್ನು ಕಂಡು ಮುಜುಗುರಕ್ಕೆ ಒಳಗಾಗಿದ್ದಾರೆ.
….

Latest Indian news

Popular Stories