ಹೊನ್ನಾವರ, ಕಾರವಾರ,ಭಟ್ಕಳ, ‌ಕುಮಟಾದಲ್ಲಿ ಸತತ ಮಳೆ | ತಗ್ಗು ಪ್ರದೇಶ ಜಲಾವೃತ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಭಟ್ಕಳ, ಕುಮಟಾ,ಹೊನ್ನಾವರ, ಕಾರವಾರ ಸೇರಿದಂತೆ ಕರಾವಳಿ ತಾಲೂಕಿನಲ್ಲಿ ಸತತ ಮಳೆ ಮುಂದುವರೆದಿದೆ.

ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಗುರುವಾರರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಬುಧುವಾರ ಭಟ್ಕಳ, ಹೊನ್ನಾವರ ತಾಲೂಕಿನಾದ್ಯಂತ ಅತ್ಯಧಿಕ ಪ್ರಮಾಣದ ಮಳೆ ಸುರಿದಿದೆ. ಹೊನ್ನಾವರ 96.9 ಮಿಲಿಮೀಟರ್ ಮಳೆ ಆಗಿದೆ. ಭಟ್ಕಳ 95.4, ಕುಮಟಾ 95.8, ಕಾರವಾರ 63 ಎಂ.ಎಂ. ಮಳೆಯಾಗಿದೆ. ಭಟ್ಕಳ ತಾಲೂಕಿನ ಹೆಬಳೆ ಗ್ರಾಮ ವ್ಯಾಪ್ತಿಯ ಜಟಗೇಶ್ವರ ದೇವಾಲಯ ಸಮೀಪದ ಪ್ರದೇಶ ಸಂಪೂರ್ಣ ಜಲವೃತವಾಗಿದೆ.ಮುರ್ಡೇಶ್ವರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರದೇಶ ನೀರಿನಿಂದ ಸುತ್ತುವರಿದಿದೆ. ಮಳೆ ನೀರಿನಿಂದಾಗಿ ಭಟ್ಕಳದ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ತೊಂದರೆ ಅನುಭವಿಸಿದರು.

ಮಳೆಯ ಅಬ್ಬರಕ್ಕೆ ಕಾರವಾರ ಹಣಕೋಣದ ಕೆಲ ಅಂಗಡಿ ,ಮನೆ ಜಲಾವೃತವಾಗಿವೆ.ಕುಮಟಾ, ಭಟ್ಕಳ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗುತ್ತಿದೆ. ಕುಮಟಾ ವಾಲ್ಗಳ್ಳಿ ಗ್ರಾಮ, ಕೂಜಳ್ಳಿ ಹೋಬಳಿ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಮಳೆಯಿಂದ ಕುಮಟಾ – ಸಿದ್ದಾಪುರ ರಸ್ತೆ ಜಲಾವೃತದಿಂದಾಗಿ ಸಂಚಾರ ತಾತ್ಕಾಲಿಕ ಬಂದ್ ಆಗಿದೆ. ಕುಮಟಾ ಹಾಗೂ ಭಟ್ಕಳದಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ ರೀತಿಯಾಗಿ ಮಳೆ ಮುಂದುವರೆದರೆ ಜಿಲ್ಲೆಯ ಕೆಲವು ತಾಲೂಕಿನಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ.

ಸುರಕ್ಷತಾ ಕ್ರಮವಾಗಿ ಎಲೆಕ್ಟ್ರಿಕ್ ಉಪಕರಣ ಫ್ರಿಜ್ , ಟಿವಿಗಳನ್ನ ಬಂದ್ ಮಾಡುವಂತೆ ಹೆಸ್ಕಾಂ ಇಲಾಖೆ ಮನವಿ ಮಾಡಿದ್ದು, ಮಳೆ ಬರುವಾಗ ಶಿಥಿಲ ಕಟ್ಟಡ, ಮರದ ಕೆಳಗಡೆ ನಿಲ್ಲದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಜಿಲ್ಲೆಯ ಸರಾಸರಿ 47.3 ಮಿಲಿ ಮೀಟರ್ ಮಳೆ ಸುರಿದಿದೆ‌. ಹಳಿಯಾಳದಲ್ಲಿ ಕಡಿಮೆ ಮಳೆ ದಾಖಲಾಗಿದೆ.
….

Latest Indian news

Popular Stories