ಹೊನ್ನಾವರ ಕಾಸರಕೋಡು ಟೊಂಕಾ‌ ಸುತ್ತಮುತ್ತ ನಿಷೇದಾಜ್ಞೆ ಜಾರಿ

ಕಾರವಾರ : ಹೊನ್ನಾವರ ಕಾಸರಕೋಡು ಟೊಂಕಾ‌ ಪ್ರದೇಶದಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಅಡ್ಡಿಪಡಿಸುತ್ತಾ ಕೆಲವರು ಕಾರ್ಮಿಕರೊಗೆ ತೊಂದರೆ ಕೊಡಿತ್ತಿದ್ದಾರೆಂದು ಹೊನ್ನಾವರ ಬಂದರು ಅಧಿಕಾರಿ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಟೊಂಕಾ ಪ್ರದೇಶದ ಸುತ್ತಮುತ್ತ ನಿಷೇದಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ‌.


ಹೊನ್ನಾವರ ಕಾಸರಗೋಡು ಟೊಂಕಾ ಪ್ರದೇಶದಲ್ಲಿ ಆರಂಭಿಕ ಹಂತದ ಕಾಮಗಾರಿಗೆ 93 ಎಕರೆ ಬಂದರು ಇಲಾಖೆಗೆ ಸೇರಿದ ಭೂಮಿಯನ್ನು ಖಾಸಗಿ ಕಂಪನಿಗೆ ಶರತ್ತುಗಳ ಮೇಲೆ‌ ನೀಡಲಾಗಿದೆ.‌


ಬಂದರಿಗೆ ರಸ್ತೆ ನಿರ್ಮಾಣಕ್ಕೆ ಸಹ ಕೆಲವರು ಅಡ್ಡಿ ಮಾಡುತ್ತಿದ್ದು, ನಿರಂತರವಾಗಿ ಕಾರ್ಮಿಕರಿಗೆ, ಬಂದರು ಇಲಾಖೆಯ ಸಿಬ್ಬಂದಿಗೆ ತೊಂದರೆ ಕೊಡುತ್ತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ 1973 ಕಾಯ್ದೆ ಅನ್ವಯ 144 ಜಾರಿ ಮಾಡಿದ್ದಾರೆ.


ಸ್ಥಾಪಿತ ಹಿತಾಸಕ್ತಿಗಳು ದೊಣ್ಣೆ, ಕಡಲಿ, ಮುಂತಾದ ಮಾರಕಾಸ್ತ್ರ ಹಿಡಿದು ತಿರುಗಾಡುವುದನ್ನು ೫ ಕ್ಕಿಂತ ಹೆಚ್ಚಿನ ಜನ ಗುಂಪು ಸೇರುವುದ‌ನ್ನು ನಿಷೇಧಿಸಲಾಗಿದೆ. ಕಲ್ಲು ತೂರಾಟ, ಧರಣಿ ,ಪ್ರತಿಭಟನೆ ಮಾಡದಂತೆ 144 ಸೆಕ್ಷನ್ ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದ್ದಾರೆ.
ಹೊನ್ನಾವರ ಟೊಂಕಾದಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಆರು ವರ್ಷದ ಹಿಂದೆಯೇ ಅಡಿಗಲ್ಲು ಹಾಕಲಾಗಿದೆ. 2014 ರಲ್ಲಿ ಬಂದರು ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ. ಆದರೆ ಸ್ಥಾಪಿತ‌ ಹಿತಾಸಕ್ತಿಗಳು ಕಳೆದ ಐದು ವರ್ಷದಿಂದ ಬಂದರು ನಿರ್ಮಾಣಕ್ಕೆ ಅಡ್ಡಿ ಮಾಡುತ್ತಿವೆ. ಈಗ ಬಂದರು ಕಾಮಗಾರಿಗೆ ತೊಂದರೆಯಾಗದಂತೆ ನಿಷೇದಾಜ್ಞೆ ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.
…..

Latest Indian news

Popular Stories