
ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ: ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನ
ಉತ್ತರ ಕನ್ನಡ: ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ ವಿತರಿಸಲಾಗುವ ಯುಡಿಐಡಿ ಕಾರ್ಡ್ಗಳ ವಿತರಣೆಯಲ್ಲಿ ಶೇ.97.23 ಪ್ರಗತಿ ಸಾಧಿಸುವ ಮೂಲಕ ಉತ್ತರ ಕನ್ನಡ ಜಿಲ್ಲೆಯು ರಾಜ್ಯದಲ್ಲೇ ದ್ವಿತೀಯ ಸ್ಥಾನ ಪಡೆದಿದೆ.
ಜಿಲ್ಲೆಯಲ್ಲಿ ಡಿಸೆಂಬರ್ವರೆಗೆ 25,766 ಅರ್ಜಿಗಳನ್ನು ಸ್ವೀಕರಿಸಿದ್ದು, ಅವುಗಳಲ್ಲಿ 5,704 ಅರ್ಜಿಗಳು ಮರು ಅರ್ಜಿ ಸಲ್ಲಿಕೆ ಮತ್ತಿತರ ಕಾರಣಗಳಿಂದ ತಿರಸ್ಕೃತಗೊಂಡಿದ್ದವು. ಬಾಕಿ ಉಳಿದ 20,062 ಅರ್ಜಿಗಳಲ್ಲಿ 19,507 ಅರ್ಜಿಗಳನ್ನು ಪರಿಶೀಲಿಸಿ ಯುಡಿಐಡಿ ಕಾರ್ಡ್ಗಳನ್ನು ಸೃಜಿಸಲಾಗಿದ್ದು, 17,581 ಕಾರ್ಡ್ಗಳನ್ನು ಮುದ್ರಿಸಿ ವಿತರಿಸಲಾಗಿದೆ. ಹಾಗೂ 1,926 ಕಾರ್ಡ್ಗಳು ಮುದ್ರಣಕ್ಕೆ ನೀಡಲಾಗಿದೆ.
ಜಿಲ್ಲೆಯ ಕಾರವಾರ ಮೆಡಿಕಲ್ ಕಾಲೇಜುನಲ್ಲಿ ಸ್ವೀಕಾರವಾದ ಅರ್ಹ 11,410 ಅರ್ಜಿಗಳಲ್ಲಿ 11,145 ಯುಡಿಐಡಿ ಕಾರ್ಡ್ಗಳನ್ನು ಸೃಜಿಸಿದ್ದು ಶೇ.97.68, ಅಂಕೋಲ ತಾಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 413 ಅರ್ಜಿಗಳಲ್ಲಿ 407 ಯುಡಿಐಡಿ ಕಾರ್ಡ್ಗಳನ್ನು ಸೃಜಿಸಿದ್ದು ಶೇ.98.55, ಕುಮುಟಾ ತಾಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 474 ಅರ್ಜಿಗಳಲ್ಲಿ 457 ಯುಡಿಐಡಿ ಕಾರ್ಡ್ಗಳನ್ನು ಸೃಜಿಸಿದ್ದು ಶೇ.96.41, ಹೊನ್ನಾವರ ತಾಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 866 ಅರ್ಜಿಗಳಲ್ಲಿ 831 ಯುಡಿಐಡಿ ಕಾರ್ಡ್ಗಳನ್ನು ಸೃಜಿಸಿದ್ದು ಶೇ.95.96, ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 951 ಅರ್ಜಿಗಳಲ್ಲಿ 905 ಯುಡಿಐಡಿ ಕಾರ್ಡ್ಗಳನ್ನು ಸೃಜಿಸಿದ್ದು ಶೇ.95.16, ಶಿರಸಿ ತಾಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 1,926 ಅರ್ಜಿಗಳಲ್ಲಿ 1,920 ಯುಡಿಐಡಿ ಕಾರ್ಡ್ಗಳನ್ನು ಸೃಜಿಸಿದ್ದು ಶೇ.99.69, ಸಿದ್ದಾಪುರ ತಾಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 542 ಅರ್ಜಿಗಳಲ್ಲಿ 515 ಯುಡಿಐಡಿ ಕಾರ್ಡ್ಗಳನ್ನು ಸೃಜಿಸಿದ್ದು ಶೇ.95.02, ಯಲ್ಲಾಪುರ ತಾಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 218 ಅರ್ಜಿಗಳಲ್ಲಿ 175 ಯುಡಿಐಡಿ ಕಾರ್ಡ್ಗಳನ್ನು ಸೃಜಿಸಿದ್ದು ಶೇ.80.28, ಮುಂಡಗೋಡು ತಾಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 1,048 ಅರ್ಜಿಗಳಲ್ಲಿ
ಅರ್ಜಿಗಳಲ್ಲಿ 1,003 ಯುಡಿಐಡಿ ಕಾರ್ಡ್ಗಳನ್ನು ಸೃಜಿಸಿದ್ದು ಶೇ.95.71, ಹಳಿಯಾಳ ತಾಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 1,653 ಅರ್ಜಿಗಳಲ್ಲಿ 1,598 ಯುಡಿಐಡಿ ಕಾರ್ಡ್ಗಳನ್ನು ಸೃಜಿಸಿದ್ದು ಶೇ.96.67, ಜೋಯಿಡಾ ತಾಲ್ಲೂಕು ಆಸ್ಪತ್ರೆಯಲ್ಲಿ ಸ್ವೀಕಾರವಾದ ಅರ್ಹ 561 ಅರ್ಜಿಗಳಲ್ಲಿ 551 ಯುಡಿಐಡಿ ಕಾರ್ಡ್ಗಳನ್ನು ಸೃಜಿಸಿದ್ದು ಶೇ.98.22 ಪ್ರಗತಿಯಾಗಿದ್ದು ಒಟ್ಟು ಜಿಲ್ಲೆಯಲ್ಲಿ ಶೇ.97.23 ಸಾಧನೆ ಆಗಿದೆ.
ಈ ಯುಡಿಐಡಿ ಗುರುತಿನ ಚೀಟಿ ಯೋಜನೆಯು ವಿಶೇಷ ಚೇತನರಿಗೆ ವೈದ್ಯಕೀಯ ಪ್ರಾಧಿಕಾರಗಳಿಂದ ದೃಢೀಕರಿಸಲಾಗುವ ವೈದ್ಯಕೀಯ ಪ್ರಮಾಣ ಪತ್ರದ ಸಮಗ್ರ ಮಾಹಿತಿಯುಳ್ಳ ಗಣಕೀಕೃತ ಗುರುತಿನ ಚೀಟಿಯನ್ನು ನೀಡುವ ವ್ಯವಸ್ಥೆಯಾಗಿದ್ದು, ಇದರಲ್ಲಿ ವಿಶೇಷ ಚೇತನ ವ್ಯಕ್ತಿಯ ವಿವರಗಳು ಹಾಗೂ ಅವರಲ್ಲಿರುವ ವಿಕಲತೆಯ ವಿವರ ಮತ್ತು ಪ್ರಮಾಣವನ್ನು ನಮೂದಿಸಲಾಗಿರುತ್ತದೆ.




