ದೆಹಲಿ :ಬಾಗಿಲ ಮಧ್ಯೆ ಬಟ್ಟೆ ಸಿಲುಕಿ ಮೆಟ್ರೋ ರೈಲಿನಡಿಗೆ ಬಿದ್ದ ಮಹಿಳೆ ಸಾವು

ನವದೆಹಲಿ: ಇಂದರ್‌ಲೋಕ್‌ ನಿಲ್ದಾಣದಲ್ಲಿ ಮೆಟ್ರೋ ರೈಲಿನಡಿ ಸಿಲುಕಿದ್ದ 35 ವರ್ಷದ ಮಹಿಳೆಯೊಬ್ಬರು ಗಾಯಗೊಂಡು ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ.

ಗುರುವಾರ ಮಹಿಳೆ ರೀನಾರ ಬಟ್ಟೆಯ ಒಂದು ಭಾಗವು ಮೆಟ್ರೋ ಬಾಗಿಲುಗಳು ಮುಚ್ಚಿದಾಗ ಅದರ ನಡುವೆ ಸಿಲುಕಿಕೊಂಡಿತು.

ಈ ವೇಳೆ, ಅವರು ಕೆಳಕ್ಕೆ ಬಿದ್ದು ಗಾಯಗೊಂಡಿದ್ದರು. ಆದ್ರೆ, ಮಹಿಳೆ ರೈಲಿನಿಂದ ಇಳಿಯುತ್ತಿದ್ದಳೋ ಅಥವಾ ಹತ್ತುತ್ತಿದ್ದಾಳೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

“ಇಂದರ್‌ಲೋಕ್ ಮೆಟ್ರೋ ನಿಲ್ದಾಣದಲ್ಲಿ ಗುರುವಾರ ಘಟನೆಯೊಂದು ನಡೆದಿದ್ದು, ಮಹಿಳಾ ಪ್ರಯಾಣಿಕರ ಬಟ್ಟೆ ರೈಲಿಗೆ ಸಿಕ್ಕಿಹಾಕಿಕೊಂಡು ಗಾಯಗೊಂಡು ಆಸ್ಪತ್ರೆಯಲ್ಲಿ ಶನಿವಾರ ಸಾವನ್ನಪ್ಪಿದ್ದಾರೆ.

Latest Indian news

Popular Stories