
Uttara Kannada
ʻಪ್ರಜಾಪ್ರಭುತ್ವ ಉಳಿಸಿʼ: ಸಂಸತ್ತಿನಿಂದ ಅಮಾನತುಗೊಂಡವರಿಂದ ದೆಹಲಿಯಲ್ಲಿ ಪ್ರತಿಭಟನೆ
ನವದೆಹಲಿ: ಈ ವಾರ ಸಂಸತ್ತಿನಿಂದ ಅಮಾನತುಗೊಂಡಿರುವ 140ಕ್ಕೂ ಹೆಚ್ಚು ಪ್ರತಿಪಕ್ಷಗಳ ಸಂಸದರು ಇಂದು ಬೆಳಗ್ಗೆ ಹಳೆ ಸಂಸತ್ತಿನಿಂದ ಮಧ್ಯ ದಿಲ್ಲಿಯ ವಿಜಯ್ ಚೌಕ್‌ವರೆಗೆ “ಪ್ರಜಾಪ್ರಭುತ್ವ ಉಳಿಸಿ” ಎಂಬ ದೊಡ್ಡ ಬ್ಯಾನರ್ ಮತ್ತು “ಸಂಸತ್ ಪಂಜರದಲ್ಲಿ, ಪ್ರಜಾಪ್ರಭುತ್ವ ಹೊರಹಾಕಲಾಗಿದೆ” ಎಂಬ ಫಲಕಗಳನ್ನು ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಕೂಡ ಭಾಗಿಯಾಗಿದ್ದರು. ಈ ವೇಳೆ, ʻಸುಮಾರು ಮೂರನೇ ಎರಡರಷ್ಟು ಪ್ರತಿಪಕ್ಷಗಳನ್ನು ಹೊರಹಾಕಿದ ನಂತರ ಭಾರತದ ಕ್ರಿಮಿನಲ್ ಕಾನೂನುಗಳ ಬದಲಿಗೆ ಮೂರು ಮಸೂದೆಗಳನ್ನು ಅಂಗೀಕರಿಸಿದ ಆಡಳಿತಾರೂಢ ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲʼ ಎಂದು ಆರೋಪಿಸಿದರು.




