Uttara Kannada

ಕೆಜಿಗೆ 200 ರೂ. ತಲುಪಿದ ʻಬೆಳ್ಳುಳ್ಳಿʼ ಬೆಲೆ

ನವದೆಹಲಿ: ಬೆಳ್ಳುಳ್ಳಿ ಬೆಲೆ ಗಗನಕ್ಕೇರಿದ್ದು, ಪ್ರತಿ ಕೆಜಿಗೆ 200 ಗಡಿ ದಾಟಿದೆ.

ಈ ಬಾರಿ ಮಾರುಕಟ್ಟೆಗೆ ಬೆಳ್ಳುಳ್ಳಿ ಆಮದು ಕಡಿಮೆಯಾಗಿರುವುದರಿಂದ ಬೆಲೆ ಏರಿಕೆಯಾಗಿದ್ದು, ರಫ್ತು ಬೇಡಿಕೆ ಹೆಚ್ಚಿರುವುದರಿಂದ ಬೆಲೆಯೂ ಏರಿಕೆಯಾಗಿದೆ.ಮಧ್ಯಪ್ರದೇಶವು ಹೆಚ್ಚು ಬೆಳ್ಳುಳ್ಳಿಯನ್ನು ಉತ್ಪಾದಿಸುತ್ತದೆ. ಈ ರಾಜ್ಯವು ದೇಶದ ಒಟ್ಟು ಬೆಳ್ಳುಳ್ಳಿ ಉತ್ಪಾದನೆಯ ಅರ್ಧದಷ್ಟು ಕೊಡುಗೆ ನೀಡುತ್ತದೆ.

ಅಲ್ಲಿನ ಬೆಳ್ಳುಳ್ಳಿ ಕೃಷಿಕ ಸುನೀಲ್ ಪಾಟಿದಾರ್ ಮಾತನಾಡಿ, ಕಳೆದ ವರ್ಷ ಹೆಚ್ಚಿನ ರೈತರು ಬೆಳ್ಳುಳ್ಳಿಯನ್ನು ಕೆಜಿಗೆ 20 ರಿಂದ 30 ರೂ.ಗೆ ಮಾರಾಟ ಮಾಡಬೇಕಾಯಿತು. ಕೆಲ ಭಾಗದ ಉತ್ಪನ್ನ ಕೆಜಿಗೆ 5 ರೂ.ವರೆಗೆ ಮಾರಾಟವಾಗಿದ್ದು, ಇದರಿಂದ ರೈತರು ಅಪಾರ ನಷ್ಟ ಅನುಭವಿಸಿದ್ದಾರೆ.

ಈ ತಿಂಗಳು ಕೆಜಿಗೆ 150 ರಿಂದ 200 ರೂ.ಗೆ ಮಾರಾಟವಾಗಿದೆ. ಮಧ್ಯಪ್ರದೇಶದ ಮಂಡಸೌರ್ ಮಂಡಿಯಲ್ಲಿ ಈ ತಿಂಗಳು ಬೆಳ್ಳುಳ್ಳಿಯ ಗರಿಷ್ಠ ಬೆಲೆ 260 ರೂ.ಗೆ ದಾಖಲಾಗಿದ್ದು, ಕನಿಷ್ಠ ಬೆಲೆ ಕೆಜಿಗೆ 50 ರೂ. ಆಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button