ಮೆಟ್ರೋ ರೈಲಿಗೆ ಸೀರೆ ಸಿಲುಕಿ ಮೃತಪಟ್ಟ ಮಹಿಳೆ ಕುಟುಂಬಕ್ಕೆ ಮೆಟ್ರೋ ರೈಲು ನಿಗಮ(ಡಿಎಂಆರ್‌ಸಿ)ವತಿಯಿಂದ 15ಲಕ್ಷ ರೂ.ಪರಿಹಾರ ಘೋಷಣೆ

ನವದೆಹಲಿ: ದೆಹಲಿ ಮೆಟ್ರೋ ರೈಲಿನ ಬಾಗಿಲಿಗೆ ಸೀರೆ ಸಿಲುಕಿ ಅಪಘಾತಕ್ಕೀಡಾದ ಮಹಿಳೆಯ ಕುಟುಂಬಕ್ಕೆ ಮೆಟ್ರೋ ರೈಲು ನಿಗಮ(ಡಿಎಂಆರ್‌ಸಿ) 15 ಲಕ್ಷ ರೂ.ರೂಪಾಯಿ ಪರಿಹಾರ ಘೋಷಿಸಿದೆ.

ಇದುವರೆಗೆ ಮೆಟ್ರೋ ರೈಲು ಅಪಘಾತದಲ್ಲಿ ಮೃತಪಟ್ಟರೆ 5 ಲಕ್ಷ ರೂಪಾಯಿ ಪರಿಹಾರ ಮಾತ್ರ ನೀಡುತ್ತಿದ್ದ ಡಿಎಂಆರ್‌ಸಿ ಈ ಘಟನೆಯ ನಂತರ 10 ಲಕ್ಷ ರೂಪಾಯಿ ಹೆಚ್ಚಿಸಿದೆ.

ಡಿಸೆಂಬರ್ 14, ಗುರುವಾರ ನಂಗ್ಲೋಯ್ ನಿವಾಸಿ ರೀನಾ(35) ಅವರು ದೆಹಲಿಯ ಇಂದ್ರಲೋಕ್ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ರೈಗೆ ತನ್ನ ಪುತ್ರನೊಂದಿಗೆ ಏರಲು ಯತ್ನಿಸಿದ್ದರು. ಆಗ ಬಾಗಿಲಿಗೆ ಆಕೆಯ ಸೀರೆ ಸಿಕ್ಕಿಹಾಕಿಕೊಂಡಿದ್ದು, ಮೆಟ್ರೋ ರೈಲು ಮುಂದಕ್ಕೆ ಚಲಿಸಿದೆ. ಇದರಿಂದ ಆಕೆಯನ್ನು ರೈಲು ಬಹಳ ದೂರ ಎಳೆದುಕೊಂಡು ಹೋಗಿದೆ. ಆಗ ಆಕೆ ರೈಲಿನ ಚಕ್ರಗಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ರಿನಾರನ್ನು ತಕ್ಷಣವೇ ಸಫ್ದರ್‌ಜಂಗ್ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಯಿತು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಡಿಸೆಂಬರ್ 16 ರಂದು ಕೊನೆಯುಸಿರೆಳೆದಿದ್ದರು.

Latest Indian news

Popular Stories