
Uttara Kannada
ನೀವು ಪ್ರಧಾನಿಯಾಗಲು ಬಯಸಿದರೆ ಮೋದಿ ವಿರುದ್ಧ ಸ್ಪರ್ಧಿಸಿʼ : ಮಮತಾ ಬ್ಯಾನರ್ಜಿ ಗೆ ಬಿಜೆಪಿ ಸವಾಲು
ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಣಾಸಿಯಿಂದ ಸ್ಪರ್ಧಿಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಸವಾಲು ಹಾಕಿದೆ.
ಮಮತಾ ಬ್ಯಾನರ್ಜಿ ವಾರಣಾಸಿಯಿಂದ ಲೋಕಸಭಾ ಚುನಾವಣೆಯಲ್ಲಿ ಏಕೆ ಸ್ಪರ್ಧಿಸುವುದಿಲ್ಲ? ಮಮತಾ ಬ್ಯಾನರ್ಜಿಗೆ ಧೈರ್ಯವಿದ್ದರೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬದಲಿಗೆ ಸ್ಪರ್ಧಿಸಲಿ ನೀವು ಪ್ರಧಾನಿಯಾಗಲು ಬಯಸುತ್ತೀರಿ, ಅಲ್ಲವೇ? ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಿ ಗೆಲ್ಲಿ ಎಂದು ಸವಾಲು ಹಾಕಿದ್ದಾರೆ.




