ಶಿರಸಿಯಲ್ಲಿ ಗಾಂಜಾ ಮಾರಾಟ: ಒರ್ವನ ಬಂಧನ

ಕಾರವಾರ : ಶಿರಸಿ ನಗರದ ರಾಮನಬೈಲ್ ಸನಿಹ ಕುಳವೆ ಕ್ರಾಸ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊರ್ವನನ್ನು ಶಿರಸಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಇಂದು ಅಪರಾಹ್ನ ಮೂರು ಮುಕ್ಕಾಲು ಗಂಟೆ ಸುಮಾರಿಗೆ ಗಣೇಶ ನಗರ ನಿವಾಸಿ ನಿಹಾಲ್ ಡಿಯಾಗೋ ಫರ್ನಾಂಡಿಸ್ ಯಾನೆ ಬಾಬಾ ಅಕ್ರಮವಾಗಿ ಗಾಂಜಾವನ್ನು ರಾಮನಬೈಲ್ ಕುಳವೆ ಕ್ರಾಸ್ ಬಳಿ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಆರೋಪಿತನಿಂದ ಅಂದಾಜು 80,000 ರೂ. ಬೆಲೆಯ , 804 ಗ್ರಾಂ ಗಾಂಜಾ , ಹಾಗೂ 2100 ರೂ .ನಗದು ಹಣ ಹಾಗೂ ಸಾಗಾಟ ಮಾಡಲು ಬಳಸಿದ 20,000 ರೂ. ಮೌಲ್ಯದ ಕೆಎ- 31 ಯು -5393 ನಂಬರಿನ ಹಿರೊ ಸ್ಲೆಂಡರ್ ಮೊಟಾರ್ ಸೈಕಲ್ ಜಪ್ತಿ ಮಾಡಿಕೊಳ್ಳಲಾಗಿದೆ.


ಎಸ್ಪಿ ಎನ್ ವಿಷ್ಣುವರ್ಧನ್, ಎ ಎಸ್ಪಿ ಸಿ.ಟಿ ಜಯಕುಮಾರ್
ಶಿರಸಿ ಉಪ ವಿಭಾಗದ ಡಿಎಸ್ಪಿ ಗಣೇಶ ಕೆ‌.ಎಲ್., ಶಿರಸಿ ವೃತ್ತ ನಿರೀಕ್ಷಕ ಶಶಿಕಾಂತ ವರ್ಮಾ ರವರ ಮಾರ್ಗದರ್ಶನದಲ್ಲಿ ಶಿರಸಿ ನಗರ ಠಾಣೆಯ ಪಿಎಸ್ಐ ನಾಗಪ್ಪ .ಬಿ. ನೇತೃತ್ವದಲ್ಲಿ ಸಿಬ್ಬಂದಿಗಳಾದ ಹನುಮಂತ ಕಬಾಡಿ,ಪ್ರಶಾಂತ ಪಾವಸ್ಕರ್,ನಾಗಪ್ಪ ಲಮಾಣಿ,ಸದ್ದಾಂ ಹುಸೇನ್,ಪ್ರವೀಣ್ ಎನ್ ರವರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ . ಪಿಎಸ್ಐ ಮಹಾಂತಪ್ಪ ಕುಂಬಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
…..

Latest Indian news

Popular Stories