
Uttara Kannada
ಅಕ್ರಮವಾಗಿ ಗಾಂಜಾ ಸಾಗಾಟ : ಇಬ್ಬರ ಬಂಧನ
ಕಾರವಾರ : ಅಕ್ರಮವಾಗಿ ಸ್ಕೂಟಿಯಲ್ಲಿ ಕುಮಟಾ ದಿಂದ ಶಿರಸಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಶಿರಸಿ ನಗರಠಾಣೆ ಪೊಲೀಸರು ನೀಲೇಕಣಿ ಕ್ರಾಸ್ ಬಳಿ, ವಾಹನ ತಪಾಸಣೆ ಮಾಡುವಾಗ ಬಂಧಿಸಿದ್ದಾರೆ.
ಅನುರಾಗ ಗುರು ಜೋಗಳೇಕರ್ (23) , ಸೋಹನ್ ಎಲ್. ಭಂಡಾರಿ(23) ಗಂಜಾ ಸಾಗಟದಲ್ಲಿ ಸಿಕ್ಕಿ ಬಿದ್ದವರು. ಅನುರಾಗ ಶಿರಸಿ ತಾಮೀರ್ ಕೋಅಪರೇಟಿವ್ ಸೊಸೈಟಿ ಹತ್ತಿರದ ನಿವಾಸಿ. ಸೋಹನ್ ಶಿರಸೊ ಬಸ್ ಡಿಪೋ ಹತ್ತಿರದ ನಿವಾಸಿ. ಇವರಿಂದ 101 ಗ್ರಾಂ, ಗಾಂಜಾ, ಸ್ಕೂಟಿ ವಶಪಡಿಸಿಕೊಳ್ಳಲಾಗಿದೆ. ಡಿವೈಎಸ್ಪಿ ಗೀತಾ,ಸಿಪಿಐ ಶಶಿಕಾಂತ ವರ್ಮ ಮಾರ್ಗದರ್ಶನ ಮಾಡಿದ್ದರು.
ಪಿಎಸ್ ಐ ನಾಗಪ್ಪ ಬಿ. ಹನುಮಂತ ಕಬಾಡಿ ಹಾಗೂ ಸಿಬ್ಬಂದಿ ಗಾಂಜಾ ಆರೋಪಿಗಳನ್ನು ಬಂಧಿಸಿ, ಕಾನೂನು ಕ್ರಮ ಕೈಗೊಂಡಿದ್ದಾರೆ.




