17ರಂದು ರಾಯಚೂರಿನಲ್ಲಿ ಉದ್ಯೋಗ ಮೇಳ

ರಾಯಚೂರು: ಸಂಭವ ಫೌಂಡೇಶನ್ ವತಿಯಿಂದ ಮೇ 17ರಂದು ನಗದ ಸ್ಟೇಶನ್ ರಸ್ತೆಯ ರುಡ್ಸ್ ಎಂಎಸ್ ಡಬ್ಲ್ಯೂ ಕಾಲೇಜಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಸಂಭವ ಫೌಂಡೇಶನ್ ಸಹ ಸಂಚಾಲಕ ಅನಂತ ನಾಗ್ ತಿಳಿಸಿದರು.

ಎಲೆಕ್ಟ್ರಿಕಲ್ ವೆಹಿಕಲ್ ಸರ್ವಿಸ್ ಟೆಕ್ನಿಷಿಯಲ್ (ದ್ವಿಚಕ್ರ ವಾಹನ) ಉದ್ಯಮಕ್ಕೆ ಸಂಬಂಧಿಸಿದಂತೆ ವಾಹನಗಳ ಮಾರುಕಟ್ಟೆ ವ್ಯಾಪಕವಾಗಿದೆ. ನಿರುದ್ಯೋಗ ಯುವಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಡಯೋಗ್ನೋಸಿಸ್ ಆಫ್ ಎಲೆಕ್ಟ್ರಿಕ್ ವೆಹಿಕಲ್, ಮೆಕನಿಕಲ್ ಅಗ್ರಿಗ್ರೇಟ್ ಇನ್ ಎಲೆಕ್ಟ್ರಿಕ್ ವೆಹಿಕಲ್, ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ ಸಿಸ್ಟಮ್ಸ್ ವಿಥಿನ್ ವಹಿಕಲ್ ವಿಷಯಗಳನ್ನು ಒಳಗೊಂಡಂತೆ ಉದ್ಯೋಗ ಮೇಳ ನಡೆಯಲಿದೆ. ತರಬೇತಿಯೊಂದಿಗೆ ಉದ್ಯೋಗ ನೀಡಲಾಗುತ್ತದೆ ಎಂದು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಅಭ್ಯರ್ಥಿಗಳಿಗೆ ಒಂದು ತಿಂಗಳ ತರಬೇತಿ ನೀಡಲಾಗುತ್ತದೆ. ‌ಉಚಿತ ವಸತಿ, ಊಟದ ಸೌಲಭ್ಯ ನೀಡಲಾಗುವುದು. ದ್ವಿತಿಯ ಪಿಯುಸಿ, ಡಿಪ್ಲೋಮಾ, ಬಿ.ಟೆಕ್ ಅಥವಾ ಯಾವುದೇ ಪದವಿ ಪಡೆದ 18ರಿಂದ 35 ವರ್ಷ ವಯಸ್ಸಿನ ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 85489 43143ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.

ರವಿಕುಮಾರ, ಮಂಜುನಾಥ , ಸಂಜೀವ್ ಉಪಸ್ಥಿತರಿದ್ದರು.

Latest Indian news

Popular Stories