ಸಂಸ್ಕೃತದ ಮೇಲಿನ ವ್ಯಾಮೋಹ ಮೆರೆದ ಕಾಗೇರಿ

ಕಾರವಾರ : ಕರ್ನಾಟಕದ ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಚುನಾಯಿತರಾಗಿರುವ ಬಿಜೆಪಿ ಪಕ್ಷದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂಸ್ಕೃತದಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸಂಸ್ಕೃತ ಭಾಷೆಯ ಮೇಲಿನ ಪ್ರೇಮವನ್ನು, ವ್ಯಾಮೋಹವನ್ನು ತೋರಿದ್ದಾರೆ‌ .
ಭಾಷಾ ಶ್ರೇಷ್ಠತೆಯ ಮೂಲಕ ವರ್ಣ ಶ್ರೇಷ್ಠತೆಯನ್ನು ಪರೋಕ್ಷವಾಗಿ ತೋರಿದಂತಾಗಿದೆ. ಶಿಕ್ಷಣ ಸಚಿವರಾಗಿದ್ದಾಗ ಸಂಸ್ಕೃತ ಭಾಷೆಗೆ ಒತ್ತು ನೀಡುವ ಮೂಲಕ ಭಗವದ್ಗೀತೆ ಅಭಿಯಾನಕ್ಕೆ ಕೈ ಜೋಡಿಸಿದ್ದರು.

ಭಗವದ್ಗೀತೆ ಪಠಣವನ್ನು ಶಾಲಾ ಹಂತದಲ್ಲಿ ಸೇರಿಸಲು ಯತ್ನಿಸಿದ್ದರು. ಇದಕ್ಕೆ ಪರ ಮತ್ತು ವಿರೋಧ ವ್ಯಕ್ತವಾದ ಕಾರಣ ಭಗವದ್ಗೀತೆ ಅಭಿಯಾನವನ್ನು ಶಾಲಾ‌ಹಂತದಲ್ಲೇ ಸೇರುಸುವ ಪ್ರಯತ್ನ ಕೈಬಿಟ್ಟಿದ್ದರು. ಭಗವದ್ಗೀತೆ ಅಭಿಯಾನ ಒಂದು ಮಠದ ಕಾರ್ಯಕ್ರಮವಾಗಿತ್ತು ಎಂದು , ಅದನ್ನು ವಿದ್ಯಾರ್ಥಿಗಳ ಮೇಲೆ ಹೇರಿದರೆ ಕ್ರಿಶ್ಚಿಯನ್, ‌ಇಸ್ಲಾಂ , ಜೈನ , ಬೌದ್ಧ ಧರ್ಮಗ್ರಂಥಗಳ ಪಠಣಕ್ಕೆ ಅವಕಾಶ ಮಾಡಿಕೊಡುವಿರಾ ಎಂದು ಎಸ್ .ಎಫ್. ಐ .( ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ) ಟೀಕಿಸಿತ್ತು. ಪ್ರತಿಪಕ್ಷ ದಿಂದ ಸಹ ಪ್ರತಿರೋಧ ಬಂದಾಗ ಆಗ ಶಿಕ್ಷಣ ಸಚಿವರಾಗಿದ್ದ ಕಾಗೇರಿ , ಸಂಸ್ಕೃತ ಭಾಷೆಯಿಂದ ಕೊಂಚ ಅಂತರ ಕಾಪಾಡಿಕೊಂಡಿದ್ದರು.

ಕರ್ನಾಟಕದ ಬಹುತೇಕ ಸಂಸದರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಕನ್ನಡ ಭಾಷೆ ,ನೆಲದ ಪ್ರೀತಿ ತೋರಿಸಿದ್ದರೆ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತ್ರ ಸಂಸ್ಕೃತ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ಕನ್ನಡಿಗರಿಗೆ ಕಸಿವಿಸಿ ತಂದಿದೆ‌.
……

Latest Indian news

Popular Stories