ಕಾರವಾರ ಜಿಲ್ಲಾ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದ ಗಣಪತಿ ಉಳ್ವೇಕರ್

ಕಾರವಾರ: ಕ್ರಿಕೆಟ್ ಕ್ರೀಡೆ ಬ್ರಿಟಿಷರು ನೀಡಿದ ಕೊಡುಗೆ. ಆದರೆ ಇವತ್ತು ಕ್ರಿಕೆಟ್ ಭಾರತೀಯರಲ್ಲಿ ಜನಪ್ರಿಯ ಆಟವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹೇಳಿದರು‌ .
ಕಾರವಾರದ ಮಾಲಾದೇವಿ ಕ್ರೀಡಾಂಗಣದಲ್ಲಿ ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿ ಆಯೋಜಿಸಿರುವ ಜಿಲ್ಲಾ
ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ ವಿವಿಧ ತಾಲೂಕಿನಿಂದ ಬಂದ
ಪತ್ರಕರ್ತರ ತಂಡಗಳು ಕ್ರೀಡಾ ಸ್ಪೂತ ಯಿಂದ ಆಟ ಆಡಬೇಕು ಎಂದು ಅವರು ಹೇಳಿದರು.

IMG 20240204 WA0038 Uttara Kannada

ಪತ್ರಕರ್ತರು ಕ್ರಿಕೆಟ್ ಮೂಲಕ ತಮ್ಮ ಕ್ರಿಯಾಶೀಲತೆ, ಆರೋಗ್ಯ ಕಾಪಾಡಿಕೊಳ್ಳಬೇಕೆಂದರು‌ . ಎಲ್ಲಾ ತಂಡಗಳಿಗೆ ಅವರು ಶುಭಕೋರಿದರು.

ಶಾಸಕ ಸತೀಶ್ ಸೈಲ್ ದೂರವಾಣಿ ಮೂಲಕ ಪಂದ್ಯಾವಳಿಗೆ ಯಶಸ್ಸು ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿದ್ದ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ್ ಮಾತನಾಡಿ , ಕ್ರಿಕೆಟ್ ಆಟ ಇವತ್ತು ಯುವಕರಲ್ಲಿಹಾಸು ಹೊಕ್ಕಾಗಿದೆ. ಮುಂದುವರಿದ ದೇಶಗಳು ರಕ್ಷಣೆಗೆ ಆದ್ಯತೆ ನೀಡಿದಷ್ಟು, ಕ್ರೀಡೆಗೂ ಅವಕಾಶ ನೀಡುತ್ತಾರೆ. ನಮ್ಮ ದೇಶದಲ್ಲಿ ಆಹಾರದ ಕೊರತೆ ನಡುವೆ ಮೈದಾನಗಳ ಕೊರತೆಯಿದೆ ಎಂದರು.
ವೇದಿಕೆಯಲ್ಲಿದ್ದ ಸ್ಕೋಡ್ ವೇಸ್ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, ದಿನದ 24 ಗಂಟೆಯೂ ಸಮಾಜದ ಏಳ್ಗೆಗೆ ಕಾರ್ಯ ಮಾಡುವ ಪತ್ರಕರ್ತರ ಬದುಕು ಸಮಾಧಾನಕರವಾಗಿಲ್ಲ. ನಿಜವಾದ ಪತ್ರಕರ್ತ ತಲೆ ಎತ್ತಿ ಬದುಕುವುದು ಕಷ್ಟವಾಗುತ್ತಿದೆ. ಪತ್ರಕರ್ತರು ಸಂವಿಧಾನದ ನಾಲ್ಕನೇ ಅಂಗ ಎಂದು ಹೇಳಲಾಗುತ್ತದೆ. ಆದರೆ, ಅದನ್ನು ಅಧಿಕೃತವಾಗಿ ಘೋಷಿಸುವ ಕಾರ್ಯವಾಗಬೇಕು ಎಂದರು.

ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ವಿಶೇಷ ಅಥಿತಿಯಾಗಿ ಮಾತನಾಡಿ ಒತ್ತಡದಲ್ಲಿ ಬದುಕುವ ಪತ್ರಕರ್ತರು ದಿನಕ್ಕೆ 1 ಗಂಟೆ ಆಟವಾಡಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು. ತಮಗೆ ಜನಪ್ರತಿನಿಧಿಯಾಗುವ ಅವಕಾಶ ದಕ್ಕಿದಲ್ಲಿ ಜಿಲ್ಲೆಯ ಪತ್ರಕರ್ತರ ಕೋಟಾದಡಿ ಸೈಟ್ ಕೊಡುವ ಕೆಲಸ ಮಾಡುತ್ತೇನೆ. ಪತ್ರಕರ್ತರ ಕೋಟಾ ಸೃಷ್ಟಿ ಮಾಡಿ, ಸೈಟ್ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿ ಅಧ್ಯಕ್ಷ ಸ್ವಾಗತಿಸಿದರು. ಕಾರ್ಯದರ್ಶಿ ಸಂದೀಪ ಸಾಗರ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಸುಭಾಷ್ ಚಂದ್ರ ಎನ್.ಎಸ್.ವಂದಿಸಿದರು.

Latest Indian news

Popular Stories