ಕಾರವಾರ | ಸೂಕ್ತ ದಾಖಲೆಗಳಿಲ್ಲದ1,01,500 ಹಣ ವಶ

ಸೂಕ್ತ ದಾಖಲೆಗಳಿಲ್ಲದ
1,01,500 ಹಣ ವಶ

ಕಾರವಾರ : ಶಿರಸಿ ತಾಲೂಕಿನ ಚಿಪಗಿ ಚೆಕ್‌ಪೋಸ್ಟನಲ್ಲಿ ಶಿರಸಿ ವಿಧಾನಸಭಾ ಎಸ್.ಎಸ್.ಟಿ. ತಂಡದವರು ಶನಿವಾರ ಕಾರ್ ಒಂದರಲ್ಲಿ ದಾಖಲೆಯಿಲ್ಲದೆ‌ ಸಾಗಿಸುತ್ತಿದ್ದ 1,01,500 ಹಣವನ್ನು ವಶಪಡಿಸಿಕೊಂಡರು.‌


ಎಪ್ರಿಲ್ 30 ರಂದು 10-45 ಗಂಟೆ ಸುಮಾರಿಗೆ ಶಿರಸಿ ಯಿಂದ ದಾವಣಗೆರೆ ಕಡೆಗೆ ಹೋಗುತ್ತಿದ್ದ ಬಿಳಿ ಬಣ್ಣದ ಹುಂಡೈ ಕ್ರೆಟಾ ವಾಹನ ನಂ. KA-31, N-9819 ರಲ್ಲಿ ಯಾವುದೇ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 1,01,500 (ಒಂದು ಲಕ್ಷ ಒಂದು ಸಾವಿರದ ಐದುನೂರು) ಹಣವನ್ನು ಜಪ್ತಿ ಮಾಡಿದ್ದು, ಹಣವನ್ನು ಶಿರಸಿ ತಾಲೂಕಿನ ಉಪ ಖಜಾನೆಯಲ್ಲಿ ಇಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಅಪರ್ಣಾ ರಮೇಶ್ ತಿಳಿಸಿದ್ದಾರೆ.
….

Latest Indian news

Popular Stories