Karwar | ಸೀಬರ್ಡ ಯೋಜನೆಗೆ 25 ವರ್ಷ: 250 ರೈತರ ಭೂಮಿಗೆ ಹೆಚ್ಚುವರಿ ಭೂ ಪರಿಹಾರ ಸಿಕ್ಕಿಲ್ಲ

ಕಾರವಾರ : ನೌಕಾನೆಲೆಯ ನಿರಾಶ್ರಿತರಿಗೆ ಪರಿಹಾರ ಹಣ ನೀಡುವಂತೆ ಐದು ವರ್ಷದ ಹಿಂದೆಯೇ ನ್ಯಾಯಾಲಯ ತೀರ್ಪು ನೀಡಿದ್ದರು. ಈವರೆಗೆ ಪರಿಹಾರ ಮೊತ್ತ ತಲುಪಿಲ್ಲ ಎಂದು ನಿರಾಶ್ರಿತರಾದ ಕೃಷ್ಣಾನಂದ ವಿ. ನಾಯ್ಕ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ, ರಾಜ್ಯದ ಭೂಸ್ವಾಧೀನ ಇಲಾಖೆ ಪರಿಹಾರ ಯಾಕೆ ವಿಳಂಬವಾಗಲಿದೆ ಎಂದು ಸ್ಪಷ್ಟಪಡಿಸಬೇಕು. ನ್ಯಾಯಾಲಯದ ತೀರ್ಪು ಬಂದರೂ ನೌಕಾನೆಲೆಗೆ ಭೂಮಿ ಕಳೆದುಕೊಂಡವರಿಗೆ ಹಣ ಸಂದಾಯ ಆಗಿಲ್ಲ. ಭೂಸ್ವಾಧೀನ ಮಾಡಿಕೊಳ್ಳುವಾಗ ಹಣ ನೀಡುಡ ಜತೆಗೆ ಜಮೀನಿನ ಬದಲಾಗಿ ಜಮೀನು ನೀಡುತ್ತೇವೆ ಎಂದಿದ್ದರು. ಆದರೆ ಭೂಸ್ವಾಧೀನವಾಗಿ 25 ವರ್ಷವಾದರೂ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದರು.
ತಾಲೂಕಿನ ಅರಗಾ, ಬಿಣಗಾ, ಚೆಂಡಿಯಾ, ಅಮದಳ್ಳಿ ಮತ್ತು ಕೋಡಾರ ಸೆರಿದಂತೆ ವಿವಿಧೆಡೆಯಿಂದ ಪರಿಹಾರ ಹಣದ ಕುರಿತು 250 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಎಲ್ಲಾ ಕುಟುಂಬಗಳು ಈಗ ಬೀದಿಗೆ ಬಂದಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಯುವಕರಿಗೆ ಉದ್ಯೋಗ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಹೊರ ರಾಜ್ಯದ ಯುವಕರಿಗೆ ಇಲ್ಲಿ ಕೆಲಸ‌ ನೀಡಲಾಗಿದೆ. ನಮ್ಮವರು ದುಡಿಯಲು ಹೊರಗೆ ತೆರಳುತ್ತಿದ್ದಾರೆ. ಹೀಗಾಗಿ ಒಂದು ವಾರದ ಒಳಗಾಗಿ ಹಣ ಯಾಕೆ ಬಂದಿಲ್ಲ ಎಂದು ತಿಳಿಸಿ, ನಿರಾಶ್ರಿತರಿಗೆ ಹಣ ಸಂದಾಯ ಮಾಡದಿದ್ದರೆ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರಮುಖರಾದ ನೀಲಾಧರ ತಾಂಡೇಲ, ನಿರಾಶ್ರಿತರಾದ ಸುರೇಶ ಗೌಡ, ಗಣಶ್ಯಾಮ ಗುನಗ, ಪಾಂಡುರಂಗ ನಾಯ್ಕ, ಶ್ಯಾಮಲಾ ಗೌರೀಶ ಕೇಣಿಕರ,
ವಿದ್ಯಾನಂದ, ರೋಹಿದಾಸ ತಾಂಡೇಲ, ಮುರಾರಿ ತಾಂಡೇಲ, ತುಕಾರಾಮ ತಾಂಡೇಲ ಉಪಸ್ಥಿತರಿದ್ದರು.

Latest Indian news

Popular Stories