ಕಾರವಾರ | ಸೂಕ್ತ ದಾಖಲೆಗಳಿಲ್ಲದ 7,98,000 ಹಣ ವಶಕ್ಕೆ

ಕಾರವಾರ: ಉತ್ತರ ಕನ್ನಡ ಲೋಕಸಭಾ ವ್ಯಾಪ್ತಿಯ
ಖಾನಾಪೂರ ತಾಲೂಕಿನ ಕಣಕುಂಬಿ ಚೆಕ್ ಪೋಸ್ಟನಲ್ಲಿ ಶುಕ್ರವಾರ ಮುಂಜಾನೆ 8.30 ಘಂಟೆಗೆ ಸಂಜಯ ಬಸವರಾಜ ರೆಡ್ಡಿ ಬೆಳಗಾವಿ ಎಂಬುವವರು ಪ್ರಯಾಣಿಸುತ್ತಿದ್ದ ಕೆಎಸ್ ಆರ್ ಟಿಸಿ ಬಸ್ಸ (ಸಂಖ್ಯೆ ಕೆ.ಎ-29 ಎಚ್-1532) ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 7,98,000 ಹಣವನ್ನು ಕಣಕಂಬಿ ಚೆಕ್ ಪೋಸ್ಟ್ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ಗೋವಾ ರಾಜ್ಯದಿಂದ ಬೆಳಗಾವಿಗೆ ಹೋಗುವ ಸಮಯದಲ್ಲಿ ಸದರಿ ವಾಹನವನ್ನು ಕರ್ತವ್ಯನಿರತ ಎಸ್.ಎಸ್.ಟಿ ತಂಡದವರು ಮತ್ತು ಪೋಲಿಸ್ ಸಿಬ್ಬಂದಿಗಳು ತಪಾಸಣೆ ಮಾಡಲಾಗಿ 7,98,000 (ಏಳು ಲಕ್ಷದ ತೊಂಭತ್ತೆಂಟು ಸಾವಿರ) ರೂ.ಗಳನ್ನು ಯಾವುದೇ ದಾಖಲೆಗಳಿಲ್ಲದ ನಗದು ದೊರಕಿದೆ. ಸಂಜಯ ಬಸವರಾಜ ರೆಡ್ಡಿ ಬಳಿ ಹಣಕ್ಕೆ ಸಂಬಂಧಿಸಿದ
ಅಧಿಕೃತ ದಾಖಲೆಗಳು ಲಭ್ಯವಿಲ್ಲದ ಕಾರಣ, ನಿಯಮಾನುಸಾರ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಹಣವನ್ನು ಖಾನಾಪೂರದ ಉಪ ಖಜಾನೆಯಲ್ಲಿ ಇರಿಸಲಾಗಿದೆ ಎಂದು ಖಾನಾಪುರ ಸಹಾಯಕ ಚುನಾವಣಾಧಿಕಾರಿ ತಿಳಿಸಿದ್ದಾರೆ.
……

Latest Indian news

Popular Stories