ಪ್ರಧಾನಿ ಧರ್ಮ ಧರ್ಮದ ನಡುವೆ ಜನರು ಗೊಂದಲ ತಂದು ಮತ ಗಳಿಸಲು ಮುಂದಾಗಿದ್ದಾರೆ : ಮಂಜುನಾಥ ಭಂಡಾರಿ ಆರೋಪ

ಕಾರವಾರ : ಎನ್ .ಡಿ. ಎ. ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂದು ಅರಿತ ಪ್ರಧಾನಿ ಧರ್ಮ ಧರ್ಮದ ನಡುವೆ ಜನರು ಗೊಂದಲ ತಂದು ಮತ ಗಳಿಸಲು ಮುಂದಾಗಿದ್ದಾರೆ. ಜನರು ಈ ಬಾರಿ ಬಿಜೆಪಿಯನ್ನ ನಂಬುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.

ಕಾರವಾರದಲ್ಲಿ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪ್ರಜಾಪ್ರಭುತ್ವ ಪ್ರಾರಂವಾಗಿ, ಸ್ವಾತಂತ್ರ್ಯ ಸಿಕ್ಕ ನಂತರ ಈ ದೇಶದಲ್ಲಿ ‌ಯಾವ ಪರಿಸ್ಥಿತಿ ಇತ್ತು ಎನ್ನುವುದು ಅರ್ಥ ಮಾಡಿಕೊಳ್ಳಬೇಕು. ಬ್ರಿಟೀಷರು ನಮ್ಮ ಖಜಾನೆ ಖಾಲಿ ಮಾಡಿ ಹೋದಾಗಲು ಅಧಿಕಾರ ತೆಗೆದುಕೊಂಡ ಕಾಂಗ್ರೆಸ್ ಜನರ ಬದುಕನ್ನ ಕಟ್ಟಿದೆ ಎಂದು ವಿಧಾನಪರಿಷತ್ ಸದಸ್ಯರು ಹೇಳಿದರು.

ಇಂದಿರಾ ಗಾಂಧಿ ಅವರು ಉಳುವವನೆ ಭೂ ಒಡೆಯ ಯೋಜನೆ ತಂದರು. ರಾಜೀವ್ ಗಾಂಧಿ ಎಲ್ಲರೂ ರಾಜಕೀಯಕ್ಕೆ ಬರಬೇಕು ಎಂದು ಮೀಸಲಾತಿ ತಂದಿದೆ. ಎಲ್ಲಾ ಪ್ರಧಾನಿಗಳು ಒಂದೊಂದು ಯೋಜನೆ ಜನರಿಗೆ‌ ಕೊಟ್ಟಿದ್ದಾರೆ.

ಕಾಂಗ್ರೆಸ್ ಬದುಕನ್ನು ಕಟ್ಟಲು ಹೊರಟರೆ , ಬಿಜೆಪಿ ಜನರ ಭಾವನೆಯ ಮೇಲೆ ಚುನಾವಣೆ ಮಾಡುತ್ತಿದೆ. ರಾಷ್ಟ್ರ ಪ್ರೇಮಿಗಳು, ರಾಷ್ಟ್ರ ದ್ರೋಹಿಗಳು ಎಂದು ಸರ್ಟಿಫಿಕೇಟ್ ಕೊಡಲು ನೀವು ಯಾರು ಎಂದು ಬಿಜೆಪಿಯನ್ನು ಮಂಜುನಾಥ ಭಂಡಾರಿ ಪ್ರಶ್ನಿಸಿದರು‌‌.

ಪ್ರಧಾನಿ ಈ ಬಾರಿ 400 ಗೆಲ್ಲುತ್ತೇವೆ ಎಂದು ಚುನಾವಣೆ ಪ್ರಾರಂಭಿಸಿದ್ದರು. ಈಗ ಮೊದಲ ಹಂತದ ಚುನಾವಣೆ ನಂತರ ಅವರಿಗೆ ಬಹುಮತ ತಮಗೆ ಬರಲ್ಲ ಎಂಬುದು ತಿಳಿದಿದೆ .

ಮಾಂಗಲ್ಯದ ಬಗ್ಗೆ, ಮುಸ್ಲಿಂರ ಬಗ್ಗೆ ಮಾತನಾಡುತ್ತಿದ್ದಾರೆ. ಅಧಿಕಾರಕ್ಕೆ ಹೇಗಾದರು ಬರಲೇ ಬೇಕು ಎಂದು ಪ್ರಧಾನಿ ಬೇಕಾಬಿಟ್ಟಿ ಹೇಳಿಕೆ ಕೊಡುತ್ತಿದ್ದಾರೆ.

ಹತ್ತು ವರ್ಷದ ಹಿಂದೆ ಅಧಿಕಾರಕ್ಕೆ ಬರುವಾಗ ಕಪ್ಪು ಹಣ ತರುತ್ತೇವೆ ಎಂದು ಚುನಾವಣೆ ಎದುರಿಸಿದರು. ಕಪ್ಪು ಹಣ ತಂದು, ಬಂಗಾರದ ರಸ್ತೆ ಮಾಡುತ್ತೇವೆ .ಪೆಟ್ರೋಲ್ ದರ ಕಡಿಮೆ ಮಾಡುತ್ತೇವೆ,‌ ಉದ್ಯೋಗ ಕೊಡುತ್ತೇವೆ, ಭ್ರಷ್ಟ ಹಣವನ್ನ ತಮ್ಮ ಖಾತೆಗೆ ಹಾಕುತ್ತೇವೆ ಎಂದರು. ಜನರು ಅವರ ಮಾತಿಗೆ ಮರಳಾದರು.
ಆದರೆ ಹತ್ತು ವರ್ಷ ದಿಂದ ಬಿಜೆಪಿಗರು ಏನನ್ನು ಮಾಡಲಿಲ್ಲ. ಕಳೆದ ಚುನಾವಣೆ ವೇಳೆಗೆ ಪುಲ್ವಾಮ ದಾಳಿ ಇಟ್ಟುಕೊಂಡು ದೇಶ ರಕ್ಷಣೆಗೆ ಮೋದಿಯೇ ಸರಿ ಎಂದು ಚುನಾವಣೆ ಎದುರಿಸಿದರು. ಜನರು ಆಗ ಓಟು ಹಾಕಿದರು.

ಈಗ ಹತ್ತು ವರ್ಷ ಆಗಿದೆ. ಈಗ ಜನರ ಮುಂದೆ ಬನ್ನಿ. ಗ್ಯಾಸ್, ಬೆಲೆ, ತೊಗರಿಬೆಲೆ ದರ ಏನಾಗಿದೆ ? .ಡಾಲರ್ ಬೆಲೆ ಎಷ್ಟಿತ್ತು. ಈಗ ಎಷ್ಟಿದೆ ಎಂದು ತಿಳಿಸಿ. ಬೆಲೆ ಏರಿಕೆ, ನಿರುದ್ಯೋಗ, ರಕ್ಷಣೆ, ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

ನಾವು ಸಂಪತ್ತನ್ನ ಲೂಟಿ ಮಾಡಿ ಮುಸ್ಲಿಂ ಅವರಿಗೆ ಕೊಡುತ್ತೇವೆ ಎಂದು ಹೇಳುವ ನಿಮ್ಮ ಸುಳ್ಳು , ನಿಮ್ಮ ರಾಜಕೀಯ ದಿವಾಳಿತನ ತೋರಿಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೊದಲ ಬಾರಿಗೆ ಚುನಾವಣಾ ಆಯೋಗ ಪ್ರಧಾನಿ ಭಾಷಣಕ್ಕೆ ನೋಟಿಸ್ ನೀಡಿದ್ದಾರೆ. ಚುನಾವಣಾ ಆಯೋಗವೇ ನಿಮಗೆ ನೋಟಿಸ್ ಕೊಟ್ಟರೇ ನಿಮ್ಮ ಮಾತು ಹೇಗಿದೆ ಎನ್ನುವುದನ್ನ ಅರಿಯರಿ ಎಂದು ಮಂಜುನಾಥ ಕುಟಕಿದರು.

ಪ್ರಜಾಪ್ರಭುತ್ವ ಎಲ್ಲಿಗೆ ಬಂದಿದೆ ಎಂದರೆ ಪ್ರಜಾಪ್ರಭುತ್ವದಲ್ಲಿರುವ ನಾಯಕರನ್ನ ಜೈಲಿಗೆ ಕಳಿಸಿದ್ದೀರಿ,‌ಯಾವ ಆಧಾರದ ಮೇಲೆ ಜೈಲಿಗೆ ಕಳಿಸಿದ್ದೀರಿ. ನೀವೆ ತಂದ ಎಲೆಕ್ಟ್ರೋಲ್ ಬಾಂಡ್ ಸರಿಯಾಗಿಲ್ಲ, ಕಪ್ಪು ಹಣ ಮಾಡಲು ದಾರಿದೀಪ ಎಂದು ಹೇಳಲಾಗಿದೆ.‌ ಹಾಗಾದರೆ ಜೈಲಿಗೆ ಮೊದಲು ನೀವು ಹೋಗಬೇಕಲ್ಲವೇ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ದ ಕಿಡಿಕಾರಿದರು.

2014 ರಲ್ಲಿ ,2019 ರಲ್ಲಿ ಹಾಗೂ 2024 ರಲ್ಲಿ ಯಾವ ರೀತಿ ಇದ್ದಿರಿ ಎಂದು ಜನರು ನೋಡುತ್ತಿದ್ದಾರೆ. ಜನರು ಇನ್ನೂ ಬಿಜೆಪಿಯನ್ನ ನಂಬಲು ಸಾಧ್ಯವಿಲ್ಲ ಎಂದರು.

ಹೆಚ್ಚು ಸ್ಥಾನ ಗೆಲ್ಲುತ್ತೇವೆ :

ಈ ಬಾರಿ ಹದಿನೆಂಟು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ , ಬಿಜೆಪಿಗಿಂತ ಅಧಿಕ ಮತ ಕಳೆದ ವಿಧಾನಸಭೆಯಲ್ಲಿ ಪಡೆದಿತ್ತು. ಈ ಬಾರಿ ಸಹ ಹೆಚ್ಚಿನ ಮತ ಪಡೆಯಲಿದ್ದು ಹೆಚ್ಚಿನ ಸ್ಥಾನ ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದರು.

ರಾಜ್ಯದಲ್ಲಿ ಐದು ಕೋಟಿ ಜನರಿಗೆ ಗ್ಯಾರಂಟಿಯಿಂದ ಲಾಭ ಆಗಿದೆ. ಜನ ಗ್ಯಾರಂಟಿ ಕೊಡುವ ಮುನ್ನವೇ ಹದಿನೆಂಟು ಕ್ಷೇತ್ರದಲ್ಲಿ ಹೆಚ್ಚು ಸ್ಥಾನದಲ್ಲಿ ಲೀಡ್ ಪಡೆದಿದ್ದೆವು. ಈ ಬಾರಿ 25 ಸ್ಥಾನದಲ್ಲಿ ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಸುನೀಲ್ ನಾಯ್ಕ, ಶಂಭು ಶೆಟ್ಟಿ, ವೆಂಕಟೇಶ ಹೆಗಡೆ ಹೊಸಬಾಳೆ, ರಮೇಶ್ ದುಬಾಶಿ, ವಿಶ್ವನಾಥ ಗೌಡ, ಅಪೂರ್ವ ನಾಯ್ಕ ಉಪಸ್ಥಿತರಿದ್ದರು.
….

Latest Indian news

Popular Stories