ನಿಂಬಾಳ್ಕರ್ ಗೆ ಟಿಕೆಟ್ ಕೊಟ್ಟರೆ ಕಷ್ಟ: ಜಿ.ಟಿ.ನಾಯ್ಕರಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಗೆಲುವು ಸುಲಭ

ಕಾರವಾರ : ಅಂಜಲಿ ನಿಂಬಾಳ್ಕರ್ ಸಂಭಾವ್ಯ ಎಂಬ ಸುದ್ದಿ ಇದೆ. ಆದರೆ ಉತ್ತರ ಕನ್ನಡದವರಿಗೆ ಲೋಕಸಭಾ ಕ್ಷೇತ್ರದ ಟಿಕೆಟ್
ಕೊಟ್ಟರೆ ಚೆನ್ನಾಗಿತ್ತು ಎಂದು ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ
ವಿಶ್ವನಾಥ ಗೌಡ ಹೇಳಿದರು‌ .

ಕಾರವಾರದ ಪತ್ರಿಕಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ಜಿಲ್ಲೆಯ ಖ್ಯಾತ ವಕೀಲ ಜಿ.ಟಿ.ನಾಯ್ಕ ಅವರಿಗೆ
ಲೋಕಸಭಾ ಕ್ಷೇತ್ರದ ಟಿಕೆಟ್ ಕೊಟ್ಟರೆ ಅವರು ಗೆಲ್ಲುತ್ತಾರೆ‌ ‌ .


ಅಂಜಲಿ ನಿಂಬಾಳ್ಕರ್ ಖಾನಾಪುರ ಶಾಸಕರಾಗಿ ಕೆಲಸ ಮಾಡಿದ್ದರೂ ಜಿಲ್ಲೆಯ ಹೊರಗಿನವರು ಎಂಬ ಅಭಿಪ್ರಾಯ ಬರುತ್ತದೆ. ಭಾಷೆ ಬೇರೆ. ಆ ಕಾರಣ ಜಿಲ್ಲೆಯವರು ಅಭ್ಯರ್ಥಿ ಆದರೆ ಕಾಂಗ್ರೆಸನ ಜಯ ಸುಲಭದ್ದು‌ . ಅಂಜಲಿ ಅವರಿಗೆ ಬೇರೆ ಹುದ್ದೆ ಕೊಡಲಿ ಎಂದರು. ಅವರು ಮಾಜಿ ಶಾಸಕರು. ಅಂಜಲಿ ನಿಂಬಾಳ್ಕರ್ ಗೆ ಬೇರೆ ಜವಾಬ್ದಾರಿ ಕೊಡಲಿ.ಸರ್ಕಾರದಲ್ಲಿ ಅನೇಕ ಹುದ್ದೆ ಕೊಡಲಿ. ಲೋಕಸಭಾ ಟಿಕೆಟ್ ಬೇಡ ಎಂದು ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ
ವಿಶ್ವನಾಥ ಗೌಡ ಹೇಳಿದರು‌ .

ಜಿ.ಟಿ.ನಾಯ್ಕರಿಗೆ ಈ ಸಲ ಉತ್ತಮ ಅವಕಾಶ ಇದೆ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ನಾವು ಧ್ವನಿ ಎತ್ತಿದ್ದೇವೆ ಎಂದು ಜಿ.ಟಿ.ನಾಯ್ಕ ಅಭಿಮಾನಿ ಬಳಗದ ದಿವಾಕರ ನಾಯ್ಕ ಹೇಳಿದರು. ಜಿಲ್ಲೆಯಲ್ಲಿ
ಅನೇಕ ಸಮಸ್ಯೆಗಳಿಗಿವೆ. ಬಿಜೆಪಿ ಸಂಸದ ಹೆಸರು ಕೆಡಿಸಿ ಕೊಂಡಿದ್ದಾರೆ. ಶಶಿ ಭೂಷಣ, ಕಾಗೇರಿ ಎದುರು ಸೆಣಸಲು ಜಿ.ಟಿ.ನಾಯ್ಕ ಸಮರ್ಥರಿದ್ದಾರೆ. ಗ್ಯಾರಂಟಿ ಯೋಜನೆಗಳಿವೆ.
ಜಿ.ಟಿ.ನಾಯ್ಕ ವಕೀಲರು,‌ಸಿದ್ದಾಪುರ ಜನ್ಮ ಸ್ಥಳವಾದರೂ, ಕಾರವಾರ ಸೇರಿದಂತೆ, ಜಿಲ್ಲೆಯಲ್ಲಿ ಚಿರಪರಿಚಿತರು‌ . ಅಂಜಲಿ ಅವರೇ ಜಿಲ್ಲೆಯ ಟಚ್ ಇಲ್ಲ , ಆಕಾಂಕ್ಷಿ ಅಲ್ಲ. ಅನಿವಾರ್ಯ ಆದರೆ ಸ್ಪರ್ಧಿಸುವೆ ಎಂದಿದ್ದಾರೆ. ಈಗಿದ್ದಾಗ ಅವರಿಗೆ ಟಿಕೆಟ್ ಅವಶ್ಯಕತೆ ಇಲ್ಲ ಎಂದರು.

ವಕೀಲರಾದ ಜಿ.ಟಿ. ನಾಯ್ಕ ಕಾಂಗ್ರೆಸ್ ನವರಿಗೆ ಪರಿಚಿತರು. ಕ್ರೀಡೆ ಮತ್ತು ಧಾರ್ಮಿಕ ಕೆಲಸಗಳಿಗೆ ಪ್ರೋತ್ಸಾಹಿಸಿದ್ದಾರೆ. ರೈತರ ಮತ್ತು ಅತಿಕ್ರಮಣದಾರರ ಪರ ಹೋರಾಟ ಸಂಘಟಿಸಿದ್ದಾರೆ.
ಮೇಲಾಗಿ ಜಿ.ಟಿ.ನಾಯ್ಕ ಕಾಂಗ್ರೆಸ್ ಎಲ್ಲಾ ಶಾಸಕರ ಜೊತೆ ಸಂಪರ್ಕದಲ್ಲಿದ್ದಾರೆ‌ ಎ ಐ ಸಿ ಸಿ ಜೊತೆ ಸಹ ಚರ್ಚೆಯಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯವರಿಗೆ ಅವಕಾಶ ನೀಡಿದರೆ ಒಳ್ಳೆಯದು. ಜಿಲ್ಲೆಯವರಿಗೆ ಕೊಟ್ಟರೆ ನಾವು ಗೆಲ್ಲಿಸಿ ಕೊಡುವೆವು.
ಜಿ.ಟಿ.ನಾಯ್ಕ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವಕಾಶ ಮಾಡಿಕೊಡಬೇಕು ಎಂದರು.
ಮಂಕಾಳು ವೈದ್ಯರು ಸಹ ನಮ್ಮ ಪರ ಇರುವುದಾಗಿ ಹೇಳಿದ್ದಾರೆಂದು ಎನ್. ಎಸ್ .ಯು. ಐ. ಜಿಲ್ಲಾಧ್ಯಕ್ಷರು ಹೇಳಿದರು.
ಎಂ.ಇ.ಶೇಖ್ , ಶಬ್ಬೀರ ಅಹಮ್ಮದ್ ,ಅನಿಲ್ ಕೊಠಾರಿ, ಶ್ರೀಕಾಂತ್ ಮೊಗೇರಾ, ಜಗದೀಶ್ ಜೆ.ನಾಯ್ಕ, ಶಿವಾನಂದ , ಬಶೀರ್, ಜಗದೀಶ್ ಮೊಗೇರಾ, ಈಶ್ವರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

Latest Indian news

Popular Stories