ನಿಷೇಧಿತ ಕಪ್ಪೆ ಸಾಗಾಟ : ಖಾಸಗಿ ಬಸ್ ಸಹಿತ ಇಬ್ಬರು ವಶಕ್ಕೆ

ಕಾರವಾರ : ನಿಷೇಧಿತ ಕಪ್ಪೆ ಸಾಗಾಟ ಮಾಡಿದ ಆರೋಪದಲ್ಲಿ ಖಾಸಗಿ ಬಸ್ ಸಹಿತ ಇಬ್ಬರು ವಶಕ್ಕೆ ಪಡೆಯಾಗಿದೆ. ಬಸ್ ಚಾಲಕ ಹಾಗೂ ಕಂಡಕ್ಟರ್ ಕಡೆಯಿಂದ ೪೧ ಬುಲ್ ಪ್ರಾಗ್ ವಶಕ್ಕೆ ಪಡೆಯಾಗಿದೆ ಎಂದು ಕಾರವಾರ ವಲಯ ಅರಣ್ಯಾಧಿಕಾರಿ ವಿಶ್ವನಾಥ ಸೂರ್ವೆ ತಂಡ ತಿಳಿಸಿದೆ.

IMG 20240618 WA0111 Uttara Kannada IMG 20240618 WA0112 Uttara Kannada

ಬುಲ್ ಫ್ರಾಗ್ ಸಾಗಟದ ಖಚಿತ ಮಾಹಿತಿ ಮೇರೆಗೆ ಇಂದು ದಾಳಿ ನಡೆದಿತ್ತು‌ .ಖಾಸಗಿ ಬಸ್ ಕಾರವಾರದಿಂದ ಮಡಗಾಂವ್ ಗೆ ತೆರಳುತ್ತಿತ್ತು‌ .ಕಾಳಿ ನದಿ ಸೇತುವೆ ಬಳಿ ಯಾರೋ ಪಾರ್ಸಲ್ ಹಾಕಿದರು. ಅದನ್ನು ಮುಟ್ಟಿಸಲು ಒಂದು ನಂಬರ್ ನೀಡಿದ್ದರು ಎಂದು ಚಾಲಕ ,ನಿರ್ವಾಹಕ ಹೇಳಿದರು. ಇದನ್ನು ನಂಬದ ಅರಣ್ಯ ಅಧಿಕಾರಿಗಳು ಬಸ್ ವಶಕ್ಕೆ ಪಡೆದರು. ಬಹುದಿನಗಳಿಂದ ಕಪ್ಪೆ ಅಕ್ರಮ ಸಾಗಾಟದ ಮಾಹಿತಿ ಅರಣ್ಯ ಇಲಾಖೆಗೆ ಇತ್ತು.
ಬುಲ್ ಪ್ರಾಗ್ ಬಳಸಿ ಚಿಕನ್ ಮಾಡಲಾಗುತ್ತದೆ. ವಿದೇಶಿ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ
ಗೋವಾದಲ್ಲಿ ಜಂಪಿಂಗ್ ಪ್ರಾಗ್ ಚಿಕನ್ ಭಾರೀ ಇಷ್ಟದ ಖಾದ್ಯವಾಗಿದೆ. ಈ ಡಿಶ್ ಗೆ
1500 ರೂ.ಗೆ ಒಂದು ಪ್ಲೇಟ್ ಮಾರಾಟ ಮಾಡಲಾಗುತ್ತದೆ. ಗೋವಾದಲ್ಲಿ ಈ ಡಿಶ್ ಜಂಪಿಂಗ್ ಪ್ರಾಗ್ ಚಿಕನ್ ಎಂದು ಪ್ರಸಿದ್ಧಿ ಪಡೆದಿದೆ.

ಪಶ್ಚಿಮ ಘಟ್ಟಗಳಲ್ಲಿ ಸಿಗುವ ಬುಲ್ ಪ್ರಾಗ್ , ಅತೀ ದೊಡ್ಡ ಗಾತ್ರಕ್ಕೆ ಬೆಳೆಯುವ ಪ್ರಬೇಧ. ಇದು ಅಳಿವಿನಂಚು ತಲುಪಿಲ್ಲವಾದರೂ, ಇದನ್ನು ಅಕ್ರಮವಾಗಿ ಸಾಗಾಟ ಮಾಡುವುದು, ಆಹಾರಕ್ಕಾಗಿ ಬಳಸುವುದಕ್ಕೆ ಅರಣ್ಯ ಇಲಾಖೆ ನಿಷೇಧ ಹೇರಿದೆ. ಗೋವಾಕ್ಕೆ ನಿರಂತರವಾಗಿ ಸಾಗಾಟದ ಮಾಹಿತಿ ಇದ್ದ ಕಾರಣ ದಾಳಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಚಾಲಕ ಸಿದ್ದಣ್ಣ ದೇಸಾಯಿ , ಜಾನು ಪಾಲೊಲೆಮ್ ಎಂಬುವವರ ಮೇಲೆ ಪ್ರಕರಣ ದಾಖಲಾಗಲಿದೆ ಎಂದು ಅರಣ್ಯಾಧಿಕಾರಿ ವಿಶ್ವನಾಥ ತಿಳಿಸಿದ್ದಾರೆ.
….

Latest Indian news

Popular Stories