ನಿವೃತ್ತ ಪೋಲೀಸ್ ಕಾನ್ಸಸ್ಟೆಬಲ್ ಮನೆಯಲ್ಲಿ ಬಂಗಾರ , ಹಣ ಕಳ್ಳತನ

ಕಾರವಾರ :ಮನೆಯಲ್ಲಿ ಯಾರು ಇಲ್ಲದ ವೇಳೆ ಬೀಗ ಮುರಿದು ಮನೆಯಲ್ಲಿದ್ದ ಲಕ್ಷಾಂತರ ರೂ. ನಗದು ಹಾಗೂ ಆರು ತೊಲ ಬಂಗಾರ ಕಳ್ಳತನ ಮಾಡಿರುವ ಘಟನೆ ಕಾರವಾರ ನಗರದ ಕೋಡಿಭಾಗದ ಮಧ್ಯೆವಾಡದ ಏರಿಯಾದಲ್ಲಿ ನಡೆದಿದೆ.

ಕೋಡಿಭಾಗದ ನಿವೃತ್ತ ಪೊಲೀಸ್ ಮಾರುತಿ ಅಪ್ಪು ನಾಯ್ಕ ಅವರ ಮನೆ ಕಳ್ಳತವಾಗಿದೆ. ಮಾರುತಿ ನಾಯ್ಕ ಮಗನ ಭೇಟಿಗಾಗಿ ಬೇರೆ ಕಡೆ ತೆರಳಿದ್ದರು‌. ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಮುಂದಿನ ಬಾಗಿಲು ಮುರಿದು ,ಒಳ ನುಗ್ಗಿದ ಕಳ್ಳರು, ಮನೆಯ ಕಪಾಟಿನಲ್ಲಿದ್ದ 1.30 ಲಕ್ಷ ನಗದು ಹಾಗೂ 15 ತೊಲೆ ಬಂಗಾರ (ಅಂದಾಜು 6 ಲಕ್ಷ) ಕಳ್ಳತನ ಮಾಡಲಾಗಿದೆ. ಜು.30 ರ ಬೆಳಗಿನ ಜಾವ ಕಳ್ಳತನ ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಜು. 1 ರಂದು ಪ್ರಕರಣ ದಾಖಲಾಗಿದೆ.
….

Latest Indian news

Popular Stories