ಕುಮಟಾ – ಶಿರಸಿ ರಸ್ತೆ ಹೊಂಡಗಳ ವಿರುದ್ಧ ಬಾಳೆ ಗಿಡ ನೆಟ್ಟು ಪ್ರತಿಭಟನೆ : ಸ್ಥಳಕ್ಕೆ ಎಸಿ ಭೇಟಿ

ಕಾರವಾರ: ಕುಮಟಾ- ಶಿರಸಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದ ಅಳಕೋಡು ಬಳಿ ವಿಪರೀತ ಹೊಂಡ ಬಿದ್ದಿರುವುದನ್ನು ಸ್ಥಳೀಯರು ಕರವೇ ಸ್ವಾಭಿಮಾನಿ ಬಣದ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ರಸ್ತೆ ಎಲ್ಲೆಂದರಲ್ಲಿ ಅಗೆಯಲಾಗಿದೆ. ಕಾಮಗಾರಿ ಆಗುತ್ತಿರುವ ದಾರಿ ಬಿಟ್ಟು, ವಾಹನ ಓಡಾಡಲು ಬಳಸುವ ರಸ್ತೆ ಹೊಂಡಮಯವಾಗಿದೆ. ಮಳೆಗಾಲದಲ್ಲಿ ವಾಹನ ಚಲಿಸುವುದು ಕಷ್ಟವಾಗಿದೆ.ವಾಹನ ಸಾಗುವ ರಸ್ತೆ ಹೊಂಡ ಮುಚ್ಚದೆ ಹೋದ ಕಾರಣಕ್ಕೆ ನಾಗರಿಕರು ರೊಚ್ಚಿಗೆದ್ದು ಸ್ಥಳಕ್ಕೆ ಸಹಾಯಕ ಕಮಿಷನರ್ ಬರಬೇಕೆಂದು ಹಠ ಹಿಡಿದರು. ಅಲ್ಲದೆ ರಸ್ತೆಯಲ್ಲಿ ಬಾಳೆ ಗಿಡ ನೆಟ್ಟರು. ಮೀನು ಸಹ ಹಿಡಿದರು. ಗುತ್ತಿಗೆದಾರರ ವಿರುದ್ಧ ಘೋಷಣೆ ಮೊಳಗಿದವು.

1001340681 Uttara Kannada, Civic issues


ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಿಳಿದ ಎಸಿ ಕಲ್ಯಾಣಿ ಕಾಂಬ್ಳೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಿಗೆ ಸಮಾಧಾನ ಹೇಳಿದರು. ಮೂರು ದಿನದಲ್ಲಿ ರಸ್ತೆ ಹೊಂಡವನ್ನು ಗುತ್ತಿಗೆದಾರರಿಂದ ಮಚ್ಚಿಸುವ ಭರವಸೆ ನೀಡಿದರು. ವಾಹ‌ನ ಓಡಾಟಕ್ಕೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ಬಂದ‌ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
…..

Latest Indian news

Popular Stories