
Uttara Kannada
ಮಾಜಿ ಸಂಸದನಿಗೆ ಬೆದರಿಕೆಯ ಇ-ಮೇಲ್
ಕಾರವಾರ: ಮಾಜಿ ಸಂಸದ ಅನಂತ ಕುಮಾರ್ ಹೆಗಡೆಗೆ ಇ ಮೇಲ್ ಮೂಲಕ ಬೆದರಕೆ ಹಾಕಲಾಗಿದೆಯಂತೆ.ಮಾಜಿ ಸಂಸದರ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ. ಮುಂಬಯಿನ ವಿಜಿತ್ ಕಜೇರಿ ಎಂಬ ಹೆಸರಿನಲ್ಲಿ ಮೇಲ್ ಬಂದಿದೆ.
ಮೇಲ್ ನಲ್ಲಿ ಹಿಂದೂ ಮುಸ್ಲಿಂ ನಡುವೆ ಸದಾ ದ್ವೇಷ ಬಿತ್ತುವ ಬಗ್ಗೆ ಆಕ್ಷೇಪ ಮಾಡಲಾಗಿದೆಯಂತೆ . ಬೆಂಗಳೂರಿಗೆ ಮಾಜಿ ಸಂಸದ ಅನಂತ ತೆರಳುವಾಗ ವಾಹನ ಒಂದು ಓವರ್ ಟೇಕ್ ಮಾಡಿದ್ದಕ್ಕೆ ಮಾಜಿ ಸಂಸದರ ಬೆಂಗಾವಲು ಪೊಲೀಸ್ ,ಡ್ರೈವರ್ ಹಾಗೂ ಮಾಜಿ ಸಂಸದ ಸೇರಿ ಚಾಲಕನಿಗೆ ಥಳಿಸಿದ್ದರು. ಈ ಸಂಬಂಧ ತುಮಕೂರು ವ್ಯಾಪ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಘಟನೆಯ ಮರುದಿನ ಬೆದರಿಕೆಯ ಮೇಲ್ ಬಂದಿದೆ ಎಂದು ಪೊಲೀಸರಿಗೆ ನೀಡಿದ ದೂರಲ್ಲಿ ಸುರೇಶ್ ಶೆಟ್ಟಿ ಹೇಳಿದ್ದಾರೆ.
…




