ಉ.ಕ : ಕೊಡ್ಲೆ ಬೀಚಿನಲ್ಲಿ ಪ್ರವಾಸಿಗನ ಜೀವ ರಕ್ಷಣೆ

ಕಾರವಾರ : ಅಸ್ಸಾಂ ಮೂಲದ ಪ್ರವಾಸಿಗ ಅಭಿಷೇಕ್ ನಾಥ್ (೨೬) ಎಂಬುವವರು ತನ್ನ ವಿದೇಶಿ ಗೆಳತಿಯೊಂದಿಗೆ ಗೋಕರ್ಣ ಪ್ರವಾಸಕ್ಕೆಂದು ಬಂದಿದ್ದು ಕುಡ್ಲೆ ಬೀಚಿನಲ್ಲಿ ಈಜಲು ತೆರಳಿದ್ದಾಗ ಸಮುದ್ರದ ಸುಳಿಗೆ ಸಿಕ್ಕತಾನನ್ನು ಜೀವ ರಕ್ಷಕ ತಂಡ ರಕ್ಷಿಸಿದ ಘಟನೆ ಇಂದು ನಡೆದಿದೆ‌ .

ಸಮುದ್ರದಲ್ಲಿ ಅಭಿಷೇಕ್ ನಾಥ್ ಸಹಾಯಕ್ಕಾಗಿ ಅಂಗಲಾಚುತಿದ್ದಾಗ ಅದನ್ನು ಗಮನಿಸಿದ ಜೀವ ರಕ್ಷಕ ಸಿಬ್ಬಂದಿಗಳಾದ ಮಂಜುನಾಥ್ ಹರಿಕಂತ್ರ, ನವೀನ್ ಅಂಬಿಗ ಮತ್ತು ಮೈ ಸ್ಟಿಕ್ ಗೋಕರ್ಣ ಅಡ್ವೆಂಚರ್ಸ್ ನ ಸಿಬ್ಬಂದಿಗಳು ತಕ್ಷಣ ರಕ್ಷಣೆಗೆ ಧಾವಿಸಿದರು. ಜೆಟ್ ಸ್ಕೀ ಮೂಲಕ ಪ್ರವಾಸಿಗನ ಜೀವ ರಕ್ಷಣೆ ಮಾಡಿದ್ದಾರೆ. ಅಭಿಷೇಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ‌ .
…..

Latest Indian news

Popular Stories