ಶಿರಸಿಯಿಂದ ಇಬ್ಬರು ಬಾಲಕಿಯರು ನಾಪತ್ತೆ : ಪ್ರಕರಣ ದಾಖಲು

ಕಾರವಾರ: ಶಿರಸಿಯ ಗಣೇಶ ನಗರದ ಗೋಸಾವಿಗಲ್ಲಿ ಯಿಂದ ಇಬ್ಬರು ಬಾಲಕಿಯರು ನಾಪತ್ತೆಯಾಗಿದ್ದು ಈ ಸಂಬಂಧ ಮಗಳ ತಾಯಿ ಶೋಭಾ ಗೋಸಾವಿ ಶಿರಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಕಾರವಾರ ಬಾಲಕಿಯರ ಬಾಲ ಮಂದಿರದಲ್ಲಿ ಕಲಿಯುತ್ತಿದ್ದ 7 ನೇ ತರಗತಿ ವಿದ್ಯಾರ್ಥಿನಿ ಹಾಗೂ 3 ನೇ ತರಗತಿ ಕಲಿಯುತ್ತಿದ್ದ ಮತ್ತೊಬ್ಬ ಹುಡುಗಿ ಕಾರವಾರ ಬಾಲ ಮಂದಿರಕ್ಕೆ ಹೊರಟಿದ್ದರು. ಇವರು ಕಾರವಾರ ತಲುಪಿಲ್ಲ. ಮನೆಗೂ ಮರಳಿ ಬಂದಿಲ್ಲ. ಈ ಇಬ್ಬರು ಬಾಲಕಿಯರನ್ನು ಯಾರೋ ಅಪಹರಿಸಿರಬಹುದು ಎಂದು ದೂರು ನೀಡಿದ ಮಹಿಳೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶೋಭಾ ಗೋಸಾವಿ ಮಗಳು ಹಾಗೂ ಮೈದುನನ ಮಗಳು ಕಾಣೆಯಾಗಿದ್ದಾರೆ. ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಬಾಲ ಮಂದಿರದಿಂದ‌ ರಜೆ ಬಂದ ಮಕ್ಕಳು, ಮರಳಿ ಬಾಲ ಮಂದಿರಕ್ಕೆ ಹೊರಟಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ. 14 ವರ್ಷದ ಹಾಗೂ 9 ವರ್ಷದ ಹೆಣ್ಣು ಮಕ್ಕಳು ಕಾಣೆಯಾಗಿದ್ದು,‌ ಪೋಲೀಸರು ತನಿಖೆ ಪ್ರಾರಂಭಿಸಿದ್ದಾರೆ.
…..

Latest Indian news

Popular Stories