ಭಟ್ಕಳದ ಕಡವಿನಕಟ್ಟೆ ಹೊಳೆಯಲ್ಲಿ ಮುಳುಗಿ ಇಬ್ಬರು ಮೃತ್ಯು

ಕಾರವಾರ: ಭಟ್ಕಳದ ಕಡುವಿನ ಕಟ್ಟೆ ಡ್ಯಾಂ ಬಳಿ ಹೊಳೆಯಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.

ಪಾರ್ವತಿ ನಾಯ್ಕ (35), ಸೂರಜ್ ನಾಯ್ಕ (15), ಸಾವನ್ನಪ್ಪಿದ ದುರ್ವೈವಿಗಳು‌.
ಇವತ್ತು ಕಡೆಕೊಡ್ಲ ಗ್ರಾಮದ 15 ಜನ ಹೊಳೆ ಸ್ನಾನಕ್ಕೆ ತೆರಳಿದ್ದರು. ಸ್ನಾನದ ವೇಳೆ ಸೂರಜ್ ಮತ್ತು ಪಾರ್ವತಿ ಹೊಳೆಯಲ್ಲಿ ಕಾಲು ಜಾರಿ ನೀರಿನ ಸೆಳೆತಕ್ಕೆ ಸಿಕ್ಕಿ ಸಾವನ್ನಪ್ಪಿದರು ಎನ್ನಲಾಗಿದೆ.

ಇಬ್ಬರ ಶವಗಳು ದೊರೆತಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
…..

Latest Indian news

Popular Stories