ಉ.ಕ: ಜಿಲ್ಲಾಧಿಕಾರಿ ಗಂಗೂಬಾಯಿ ವರ್ಗಾವಣೆ : ಲಕ್ಷ್ಮಿ ಪ್ರಿಯಾ ನೂತನ ಜಿಲ್ಲಾಧಿಕಾರಿ

ಕಾರವಾರ: ಕಳೆದ ಜುಲೈ 26 ಕ್ಕೆ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಬಂದಿದ್ದ ಗಂಗೂಬಾಯಿ ‌ಮಾನಕರ್ ಅವರನ್ನು ಸರ್ಕಾರ ಕರ್ನಾಟಕ ಗೆಜಿಟಿಯರ್ ಇಲಾಖೆಯ ಸಂಪಾದಕಿ ಹುದ್ದೆಗೆ ವರ್ಗಾವಣೆ ಮಾಡಿದೆ.

ಉತ್ತರ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಲಕ್ಷ್ಮಿ ಪ್ರಿಯಾ ಅವರನ್ನು ಸರ್ಕಾರ ‌ನೇಮಕ‌ ಮಾಡಿದೆ.‌ ಲಕ್ಷ್ಮಿ ಪ್ರಿಯಾ ತಮಿಳು ನಾಡು ಮೂಲದವರು .ಹಿಂದೆ ಕುಮಟಾದಲ್ಲಿ ಸಹಾಯಕ ಕಮಿಷನರ್ ಆಗಿ ಎರಡು ವರ್ಷ ಕೆಲಸ ಮಾಡಿದ್ದು,‌ಜಿಲ್ಲೆಯ ಪರಿಚಯ ಉಳ್ಳವರಾಗಿದ್ದಾರೆ. ಮೈಸೂರಿನ ಅಬ್ದುಲ್ ನಜೀರ್ ಸಾಬ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದರು.

ರಾಜ್ಯ ಸರ್ಕಾರ ಇದೀಗ ಲಕ್ಷ್ಮಿ ಪ್ರಿಯಾ ಅವರನ್ನು ಮೊದಲ ಬಾರಿಗೆ ಜಿಲ್ಲಾಧಿಕಾರಿಯಾಗಿ ನೇಮಿಸಿ ,ಉತ್ತರ ಕನ್ನಡ ಜಿಲ್ಲೆಗೆ ನೇಮಕ ಮಾಡಿದೆ.

Latest Indian news

Popular Stories