ಕಾರವಾರ : ಹೊನ್ನಾವರ ಸನಿಹ ಕಾಸರಕೋಡ ಗ್ರಾಮದ ಟೊಂಕಾದಲ್ಲಿ ನಿರ್ಮಿಸುತ್ತಿರುವ ಹೊಸ ಬಂದರು ಹತ್ತಿರದ ಸಮುದ್ರ ತೀರದಲ್ಲಿ ಓರ್ವ ಅಪರಿಚಿತ ಯುವತಿಯ ಮೃತ ದೇಹವು ಸಮುದ್ರ ಅಲೆಯಲ್ಲಿ ತೇಲಿಬಂದಿದೆ.
ಈವರೆಗೂ ಯುವತಿಯ ಹೆಸರು, ವಿಳಾಸ ಹಾಗೂ ವಾರಸುದಾರರ ಪತ್ತೆಯಾಗಿದ್ದು ಇರುವುದಿಲ್ಲ.
ಅಪರಿಚಿತ ಶವದ ವಿವರ:* ಶವವಾಗಿ ಸಿಕ್ಕಿರುವ ಯುವತಿಯ ವಯಸ್ಸು ಸುಮಾರು 16 ರಿಂದ 18 ವರ್ಷ. ಎತ್ತರ 5.2 ಅಡಿ, ದುಂಡು ಮುಖ, ಗೋಧಿ ಮೈಕಟ್ಟು, ಕಪ್ಪು ಬಣ್ಣದ ಪ್ಯಾಂಟ್ ಹಾಗೂ ತಿಳಿಗುಲಾಬಿ ಬಣ್ಣದ ಟಾಪ್, ಕೊರಳಲ್ಲಿ ಕಪ್ಪು ಬಣ್ಣದ ಬೂದು ವೇಲ್ ಧರಿಸಿದ್ದಾಳೆ.
ಈ ಮೇಲಿನ ಚಹರೆಯುಳ್ಳ ಮೃತ ದೇಹದ ವಾರಸುದಾರರು ಪತ್ತೆಯಾದಲ್ಲಿ ಹೊನ್ನಾವಾರ ಪೊಲೀಸ್ ಠಾಣೆ ಅಥವಾ ಹೊನ್ನಾವಾರ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: (08387) 220248, ಮೊ. ನಂ: 9480805270, ಇ ಮೇಲ್: [email protected] ಕರೆ ಮಾಡಿ ಮಾಹಿತಿ ನೀಡುವಂತೆ ಹೊನ್ನಾವರ ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.