ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಭಟ್ಕಳದಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕೆಲಸವನ್ನ ಹರಿ ಪ್ರಕಾಶ್ ಕೋಣೆಮನೆ ಮಾಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್. ಹೆಚ್. ನಾಯ್ಕ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಂಕಾಳ ವೈದ್ಯ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವ ಆದ ನಂತರ ಹಲವಾರು ಅಭಿವೃದ್ಧಿ ಚಟುವಟಿಕೆ ಮಾಡಿ ಜನಸಾಮಾನ್ಯರಿಗೆ ಹತ್ತಿರವಾಗಿದ್ದಾರೆ.
ಪ್ರಕಾಶ್ ಕೋಣೆಮನೆ ಪತ್ರಕರ್ತರಾಗಿ ಜವಬ್ದಾರಿಯುತ ಸ್ಥಾನದಲ್ಲಿ ಇರುವವರು. ಆದರೆ ತೆಂಗಿನಗುಂಡಿಯಲ್ಲಿ ನಡೆದ ಪ್ರಕರಣದಲ್ಲಿ ಮಂಕಾಳ ವೈದ್ಯರ ಹಸ್ತಕ್ಷೇಪ ಇದೆ ಎಂದು ಸುಳ್ಳು ಆರೋಪ ಮಾಡಿದ್ದು ಅವರು ತಮ್ಮ ಜವಬ್ದಾರಿ ಸ್ಥಾನವನ್ನ ಮರೆತಿದ್ದಾರೆ ಎಂದರು .
ಕಳೆದ ಬಾರಿ ವಿಧಾನಸಭಾ ಚುನಾವಣೆ ವೇಳೆ ಯಲ್ಲಾಪುರದಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆಗ ಪರೇಶ್ ಮೇಸ್ತಾ ಸಾವಿನ ಬಗ್ಗೆ ಪುಸ್ತಕ ಬರೆದು ಜನರಿಗೆ ಸುಳ್ಳನ್ನ ಬಿತ್ತರಿಸಲು ಹೊರಟಿದ್ದರು. ಆದರೆ ಇವರದ್ದು ಪಕ್ಷದ ಆಡಳಿತದಲ್ಲಿ ಇರುವ ಸಿಬಿಐ ಪರೇಶ್ ಮೇಸ್ತಾ ಪ್ರಕರಣ ಸಂಭಂದ ಹರಿ ಪ್ರಕಾಶ್ ಕೋಣೆಮನೆ ತನ್ನ ಪುಸ್ತಕದಲ್ಲಿ ಮಾಡಿದ್ದ ಆರೋಪ ಸತ್ಯವಲ್ಲ ಎಂದು ಹೇಳಿತ್ತು.
ರಾಜ್ಯ ಸರ್ಕಾರ ಈ ಬಗ್ಗೆ ಗಂಭೀರವಾಗಿ ತೆಗೆದುಕೊಂಡು ಹರಿಪ್ರಕಾಶ ಕೋಣೆಮನೆಯನ್ನ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜ ಎಂದ ಸಿ.ಟಿ.ರವಿಯನ್ನು ಬಂಧಿಸಿ, ರಾಷ್ಟ್ರ ದ್ರೋಹಿ ಪ್ರಕರಣ ದಾಖಲಿಸಬೇಕು ಎಂದು ಆರ್.ಎಚ್.ನಾಯ್ಕ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಬಿಜೆಪಿಯ ನಾಯಕರು ಸದ್ಯ ಕೋಮುಗಲಭೆ ಸೃಷ್ಟಿ ಮಾಡಲು ಹೊರಟಿದ್ದಾರೆ ಎಂದು ಅಪಾದಿಸಿದರು.
ವಿಠೋಬ ಅಂಗಡಿಕೇರಿ, ಜಗದೀಶ್ ನಾಯ್ಕ, ನಾರಾಯಣ ಬಂಡಾರಿ, ಶ್ರೀಕಾಂತ್ ವಿ. ನಾಯ್ಕ ಪತ್ರಿಕಾಗೋಷ್ಠಿ ಯಲ್ಲಿದ್ದರು.