ಕಾರವಾರ, ಗಣೇಶಗುಡಿಯಲ್ಲಿ ಜಲಸಾಹಸ ತರಬೇತಿ ಶಿಬಿರ

ಕಾರವಾರ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ವತಿಯಿಂದ 10 ರಿಂದ 17 ವರ್ಷ ವಯೋಮಿತಿಯ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಸಾಹಸಮಯ ಬೇಸಿಗೆ ಶಿಬಿರವನ್ನು ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಆಯೋಜಿಸಲಾಗಿದೆ.

ಬೆಂಗಳೂರಿನ ಜಕ್ಕೂರು ಏರೋಡ್ರೋಮ್ ನಲ್ಲಿ ನಡೆಯುವ ವಾಯು ಸಾಹಸ ಕ್ರೀಡಾ ಶಿಬಿರದಲ್ಲಿ ಭಾಗವಹಿಸಲು (ರಾಜೇಂದ್ರ ಹಾಸಬಾವಿ 9448038220), ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ನಡೆಯುವ ಶಿಲಾರೋಹಣ ಶಿಬಿರ (ರಾಜೇಂದ್ರ ಹಾಸಬಾವಿ 9448038220), ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಗಣೇಶಗುಡಿಯಲ್ಲಿ ನಡೆಯುವ ರಿವರ್ರ‍್ಯಾಪ್ಟಿಂಗ್ ಮತ್ತು ಕಯಾಕಿಂಗ್‌ ಕೋರ್ಸ (ದಿನೇಶ ಎಸ್. ಸುವರ್ಣ9731362617), ಕೊಡಗು ಜಿಲ್ಲೆಯ ಬರ್ಪೊಳೆಯಲ್ಲಿ ನಡೆಯುವ ಸಾಹಸ ಮತ್ತು ಪ್ರಕೃತಿ ಅಧ್ಯಯನ ಶಿಬಿರ (ಮುನಿರಾಜುಆರ್. 9480383764),ಜಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರದಲ್ಲಿ ನಡೆಯುವ ಜಲ ಸಾಹಸ ಕ್ರೀಡಾ ಶಿಬಿರ (ಶಬ್ಬೀರ್‌ಎಫ್. 8971553337), ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆಯುವ ವಿಂಡ್ ಸರ್ಫಿಂಗ್ ಮತ್ತು ಸೈಲಿಂಗ್ ಶಿಬಿರ (ಪ್ರಕಾಶ ಕೆ. ಹರಿಕಂತ್ರ 7760365079) ಅವರನ್ನು ಸಂಪರ್ಕಿಸಬಹುದಾಗಿದೆ

ಶಿಬಿರದ ನಡೆಯುವ ದಿನಾಂಕ, ವಯೋಮಿತಿ ಮತ್ತು ಇತರೆ ಹೆಚ್ಚಿನ ಮಾಹಿತಿಗಾಗಿ GETHNAA.ORG ವೆಬ್‌ಸೈಟ್ ಮೂಲಕ ಪಡೆಯಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
………

Latest Indian news

Popular Stories