ಅಂಚೆ ಇಲಾಖೆಯಿಂದ ಮಾರಾಟ ಪ್ರತಿನಿಧಿಗಳ ನಿಯುಕ್ತಿಗೆ ನೇರ ಸಂದರ್ಶನ

ವಿಜಯಪುರ: ವಿಜಯಪುರ ವಿಭಾಗದ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳ ಆಯ್ಕೆಗೆ ಫೆ.12ರಂದು ವಿಜಯಪುರ ಸ್ಟೇಶನ್ ರಸ್ತೆಯಲ್ಲಿನ ಗೋಲಗುಂಬಜ್ ಹತ್ತಿರ ಇರುವ ಅಂಚೆ ಅಧೀಕ್ಷರ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ ಸಂದರ್ಶನ ಆಯೋಜಿಸಲಾಗಿದೆ.

ಸಂದರ್ಶನದಲ್ಲಿ ಭಾಗವಹಿಸುವ ಆಸಕ್ತ ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರುವುದು ಕಡ್ಡಾಯವಾಗಿರುತ್ತದೆ. ಕನಿಷ್ಠ 18 ವರ್ಷ ವಯೋಮಿತಿದವರಾಗಿರಬೇಕು. ನುರಿತ, ಸಂವಹನ ಕಲೆ ಹಾಗೂ ವಿಮಾ ಮಾರಾಟ ಕ್ಷೇತ್ರದಲ್ಲಿ ಪೂರ್ವಾನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು 5 ಸಾವಿರ ರೂ. ರಾಷ್ಟ್ರೀಯ ಉಳಿತಾಯ ಪತ್ರ ಅಥವಾ ಕಿಸಾನ ವಿಕಾಸ ಪತ್ರದ ರೂಪದಲ್ಲಿ ಭದ್ರತಾ ಠೇವಣಿಯನ್ನ ಇಡಬೇಕು. ಆಯ್ಕೆಯಾದವರಿಗೆ ಅವರು ಮಾಡಿದ ವ್ಯವಹಾರಕ್ಕೆ ತಕ್ಕಂತೆ ತಕ್ಕ ಕಮೀಶನ್ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಶೈಕ್ಷಣಿಕ ಪ್ರಮಾಣ ಪತ್ರದ ನಕಲುಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸುವಂತೆ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories