ಗೋಳಗುಮ್ಮಟ ನಿರ್ಮಾತೃ ಮೊಹ್ಮದ ಆದಿಲ್ ಷಾಹ ಪುಣ್ಯಸ್ಮರಣೆ ಆಚರಣೆ

ವಿಜಯಪುರ : ಗೋಳಗುಮ್ಮಟದ ನಿರ್ಮಾತೃ ಮೊಹ್ಮದ್ ಆದಿಲ್ ಷಾಹ ಅವರ 378 ನೇ ಪುಣ್ಯಸ್ಮರಣೆಯನ್ನು ಗೋಳಗುಮ್ಮಟ ಉದ್ಯಾನವನದಲ್ಲಿ ಆಚರಿಸಲಾಯಿತು.

ಮೊಹ್ಮದ್ ಆದಿಲ್ ಷಾಹ ಅವರು ಸಾಮಾಜಿಕ ಹಾಗೂ ವಾಸ್ತುಶಿಲ್ಪ ರಂಗಕ್ಕೆ ನೀಡಿದ ಕೊಡುಗೆಯನ್ನು ಇತಿಹಾಸ ತಜ್ಞರು, ಉಪನ್ಯಾಸಕರು ಸ್ಮರಿಸಿದರು.


ನೇತೃತ್ವ ವಹಿಸಿದ್ದ ಇತಿಹಾಸ ಪ್ರಾಧ್ಯಾಪಕ ಡಾ.ಮುಸ್ತಾಕಅಹ್ಮದ್ ಇನಾಮದಾರ, ಮೊಹ್ಮದ್ ಆದಿಲ್ ಷಾಹ ಒಬ್ಬ ಶ್ರೇಷ್ಠ ರಾಜ, ವಾಸ್ತುಶಿಲ್ಪ ಕ್ಷೇತ್ರದ ಬಹುದೊಡ್ಡ ಕೊಡುಗೆಯಾಗಿರುವ ಗೋಳಗುಮ್ಮಟದ ನಿರ್ಮಾತೃ ಸಹ ಹೌದು. ಮೊಹ್ಮದ್ ಆದಿಲ್ ಷಾಹ ಜೀವನವು ಅತ್ಯಂತ ವಿಶಿಷ್ಟವಾಗಿಯೂ ಮತ್ತು ಮಹತ್ವಪೂರ್ಣವಾದ ಸಾಧನೆಗಳಿಂದ ಕೂಡಿದ್ದು, ಉಳಿದೆಲ್ಲ ಆದಿಲ್ಶಾಹಿ ಸುಲ್ತಾನರಿಗೆ ಹೋಲಿಸಿದಾಗ ಇವನ ಮಾಡಿದ ಕಾರ್ಯಗಳು ಹೆಚ್ಚು ಮಹತ್ವದಾಗಿವೆ. ಅವನು ಅನೇಕ ಹಂತಗಳಲ್ಲಿ ಕೈಗೊಂಡ ನಿಲುವು, ಸಹಾಸ ಪ್ರವೃತ್ತಿ ಮತ್ತು ಧೈರ್ಯಯುತವಾದ ನಡವಳಿಕೆಯಿಂದ ಇವು ಸ್ಪಷ್ಟವಾಗುತ್ತವೆ ಎಂದರು. ಅವನ ವ್ಯಕ್ತಿತ್ವದಲ್ಲಿರುವ ಕಠಿಣಯುತವಾದ ನಿಲುವಿನಿಂದಾಗಿ ಅವನು ವಿಶಿಷ್ಟವಾದ ಶೌರ್ಯ ಮತ್ತು ಅಸಮಾನ್ಯವಾದ ಸೈನಿಕ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದನು. ಮಹಮ್ಮದ ಆದಿಲ್ ಷಾಹನು ಒಬ್ಬ ಶ್ರೇಷ್ಠ ಯುದ್ಧ ನಿಪುಣನಾಗಿದ್ದನು, ಚಾಣಕ್ಷ ಆಡಳಿತಗಾರನಾಗಿ ಹಾಗೂ ಹಿಂದೂಗಳೊಡನೆ ತೋರಿದ ಸಮಾನತಾ ಭಾವ ಮತ್ತು ಸಾಮ್ರಾಜ್ಯಕ್ಕೆ ತೋರಿದ ನಿಷ್ಠೆಗಳ ಪರಿಣಾಮವಾಗಿ ಅವನ ಆಳ್ವಿಕೆಯ ಕಾಲವು ಸಾಂಸ್ಕೃತಿಕವಾಗಿ ಅರಳಲು ಸಾಧ್ಯವಾಯಿತು ಎಂದರು.


ಬಿಲಾಲ್ ಬಿಲ್ವರ್, ಜಾಕೀರ ಅಲಿ, ಮೊಹ್ಮದ್ಗೌಸ್ ಮೊದಲಾದವರು ಪಾಲ್ಗೊಂಡಿದ್ದರು.

Latest Indian news

Popular Stories