ವಿಜಯಪುರ: ರಾಮ ಭಕ್ತರ ಮೇಲೆ ನಕಲಿ ಪ್ರಕರಣ ದಾಖಲಿಸಿ ಹಿಂದೂ ವಿರೋಧಿ ನೀತಿ ಹಾಗೂ ಹಿಂದೂ ನಾಯಕತ್ವ ದಮನಗೊಳಿಸಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ತಮಟೆ ಚಳವಳಿ ನಡೆಸಿದರು.
ಗಾಂಧಿ ವೃತ್ತದಿಂಧ ಆರಂಭಗೊಂಡ ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ತಮಟೆ ಬಾರಿಸುತ್ತಾ ಸರ್ಕಾರದ ಧೋರಣೆಯನ್ನು ಖಂಡಿಸಿದರು. ಅಲ್ಲಿಂದ ಆರಂಭಗೊಂಡ ಮೆರವಣಿಗೆ ಬಸವೇಶ್ವರ ವೃತ್ತ, ಡಾ.ಅಂಬೇಡ್ಕರ್ ವೃತ್ತದ ಮೂಲಕ ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿತು.
ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಮಾತನಾಡಿ,ಕಳೆದ ಮೂವತ್ತು ವರ್ಷ ಹಳೆಯದಾದ ಕೇಸನ್ನು ಮತ್ತೆ ಪ್ರಾರಂಭಿಸಿ ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿ ಎಂಬ ಹಿಂದು ಕಾರ್ಯಕರ್ತನನ್ನು ಬಂಧಿಸಿರುವುದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಕಾಂಗ್ರೆಸ್ ಸರ್ಕಾರ ತಾನು ಹಿಂದೂ ವಿರೋಧಿಯೆಂಬುದನ್ನು ಪದೇ ಪದೇ ಸಾಬೀತುಪಡಿಸುತ್ತಿದೆ.
ಅಯೋಧ್ಯೆಯಲ್ಲಿ ಜನವರಿ 22 ರಂದು ಪ್ರಭು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯಾಗುವ ಶುಭ ಸಂದರ್ಭದಲ್ಲಿ ದೇಶದೆಲ್ಲೆಡೆ ಸಂಭ್ರಮದ ವಾತಾವರಣ ಇರುವುದು ಕಾಂಗ್ರೆಸ್ಸಿಗರಿಗೆ ನೋಡಲಾಗುತ್ತಿಲ್ಲ. ಮೊದಲಿನಿಂದಲೂ ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡುತ್ತಾ ಬಂದಿರುವ ಕಾಂಗ್ರೆಸ್ ಈಗ ಅಯೋಧ್ಯೆಯಲ್ಲಿನ ಭವ್ಯ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ದೇಶದ ವಾತಾವರಣ ಕೆಡಿಸಲು ಹುನ್ನಾರ ನಡೆಸಿದೆ ಎಂದರು.
ಮೊದಲಿನಿಂದಲೂ ಮೊಘಲರು, ಡಚ್ಚರು, ಪೋರ್ಚುಗೀಸರು ಹಾಗೂ ಬ್ರಿಟೀಷರು ಈ ದೇಶದ ಸಂಪತ್ತು ಹಾಗೂ ನಮ್ಮ ಸಂಸ್ಕೃತಿಯನ್ನು ಹಾಳುಮಾಡಲು ಪ್ರಯತ್ನಿಸಿ ವಿಫಲರಾಗಿದ್ದಾರೆ, ಸ್ವಾತಂತ್ರಾನಂತರ ಕಾಂಗ್ರೆಸ್ ಈ ಕೆಲಸವನ್ನು ದೇಶವಿರೋಧಿ ಶಕ್ತಿಗಳ ಜೊತೆಗೂಡಿ ಮಾಡುವ ಮೂಲಕ ಅಸಂಖ್ಯಾತ ಹಿಂದುಗಳಿಗೆ ಅಪಮಾನ ಮಾಡುತ್ತಿದೆ. ಆದಿಕಾಲದಲ್ಲಿ ಒಳ್ಳೆಯ ಕೆಲಸವಾಗುತ್ತಿರುವಾಗ ಅಸುರ ಶಕ್ತಿಗಳು ಅದನ್ನು ಹಾಳುಗೆಡುವಲು ಪ್ರಯತ್ನಿಸುತ್ತಿದ್ದವು.
ಹಾಗೆಯೇ ಪ್ರಸ್ತುತ ಕಾಂಗ್ರೆಸ್ ಸರ್ಕಾರ ರಾಮಜನ್ಮಭೂಮಿಯ ಉದ್ಘಾಟನೆಯ ಸಮಯದಲ್ಲಿ ಈ ರೀತಿ ಹಿಂದೂ ಕಾರ್ಯಕರ್ತರನ್ನು ಬಂಧಿಸಿ ದಬ್ಬಾಳಿಕೆ ಮಾಡುತ್ತಿರುವುದನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಮುಖಂಡರಾದ ವಿಜುಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ, ಸುರೇಶ ಬಿರಾದಾರ, ಶಿವರುದ್ರ ಬಾಗಲಕೋಟ, ಮಳುಗೌಡ ಪಾಟೀಲ, ಬಸವರಾಜ ಬಿರಾದಾರ, ಸಂಜೀವ ಐಹೊಳ್ಳಿ, ಸಂಜಯ ಪಾಟೀಲ ಕನಮಡಿ, ಭೀಮಾಶಂಕರ ಹದನೂರ, ಉಮೇಶ ಕೋಳಕೂರ, ಬಾಬುರಾಜೇಂದ್ರ ನಾಯಕ, ಕೃಷ್ಣಾ ಗುನಾಳಕರ, ವಿಜಯ ಜೋಶಿ, ಶಿಲ್ಪಾ ಕುದರಗೊಂಡ, ಮಲ್ಲಮ್ಮ ಜೋಗುರ, ಲಕ್ಷ್ಮೀ ಕನ್ನೊಳ್ಳಿ, ಮಹಾನಗರ ಪಾಲಿಕೆ ಸದಸ್ಯ ರಾಜು ಕುರಿಯವರ, ರಾಹುಲ ಜಾಧವ, ಎಂ.ಎಸ್.ಕರಡಿ, ಪ್ರೇಮಾನಂದ ಬಿರಾದಾರ, ಹಾಗೂ ಈರಣ್ಣ ರಾವುರ, ಭೀಮನಗೌಡ ಸಿದ್ದರಡ್ಡಿ, ಬಸವರಾಜ ಹೂಗಾರ, ರಾಜೇಶ ತವಸೆ, ಸಂದೀಪ ಪಾಟೀಲ, ಕಾಂತು ಶಿಂಧೆ, ಶ್ರೀಧರ ಬಿಜ್ಜರಗಿ, ಪಾಪುಸಿಂಗ ರಜಪೂತ, ಸಂಗಮೇಶ ಹೌದೆ, ವಿಜಯಕುಮಾರ ಕುಡಿಗನೂರ, ವಿಕ್ರಮ ಗಾಯಕವಾಡ, ಜಗದೀಶ ಮುಚ್ಚಂಡಿ, ವಿಠ್ಠಲ ನಡುವಿನಕೇರಿ, ವಿನಾಯಕ ದಹಿಂಡೆ, ಆನಂದ ಮುಚ್ಚಂಡಿ, ವಿಕಾಸ ಪದಕಿ, ಸಂಪತ್ ಕೋಹಳ್ಳಿ, ಎ.ಎಸ್.ಪಾಟೀಲ, ಶರಣು ಕಾಖಂಡಕಿ, ವಿಜಯ ಹಿರೇಮಠ, ಮಧು ಕಲಾದಗಿ, ಗುರು ದೇಶಪಾಂಡೆ, ರವಿ ಬಿರಾದಾರ ನಾಗಠಾಣ, ಸುಶ್ಮಿತಾ ವಾಡಕರ, ವಿಜಯಲಕ್ಷ್ಮೀ ರೂಗಿಮಠ, ಗಾಯತ್ರಿ ದೇವೂರ, ಮಿತಾ ದೇಸಾಯಿ, ಶರಣಬಸು ಕುಂಬಾರ, ವಾರೀಶ ಕುಲಕರ್ಣಿ, ಉದಯ ಕನ್ನೊಳ್ಳಿ, ಸೈನಾಜ, ಮಾಯಾ ಚೌಧರಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.