ನಾವು ಆಪರೇಷನ್ ಹಸ್ತ ಮಾಡಿಲ್ಲ: ಎಂ.ಬಿ.ಪಾಟೀಲ

ವಿಜಯಪುರ: ಬಿಜೆಪಿಯಿಂದ ಹಲವರು ತಾವಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆ ನಾವು ಆಪರೇಷನ್ ಹಸ್ತ ಮಾಡಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.


ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ ಇದೆ. ಅದಕ್ಕಾಗಿ ಕಾಂಗ್ರೆಸ್ ಸಿದ್ಧಾಂತ ಒಪ್ಪಿಕೊಂಡು ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ತಾವಾಗಿಯೇ ಹಲವರು ಬರುತ್ತಿದ್ದಾರೆ ಎಂದರು.


ಅಲ್ಲದೇ, ಕಾಂಗ್ರೆಸ್ ಸೇರ್ಪಡೆಗೆ ಕಾಂಗ್ರೆಸ್ನಲ್ಲಿ ವಿರೋಧದ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಹಲವರು ತಾವಾಗಿಯೇ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ ಎಂದರು.


ಇನ್ನು ಚಂದ್ರಯಾನ-3 ಯಶಸ್ವಿ ವಿಚಾರದಲ್ಲಿ ಇಸ್ರೋ ವಿಜ್ಞಾನಿಗಳಿಗೆ ಸಚಿವ ಎಂಬಿಪಿ ಅಭಿನಂದನೆ ಸಲ್ಲಿಸಿದರು. ಕೆಳಗಿನಿಂದ ಮೇಲೆ ವರೆಗೂ ಇಸ್ರೋದ ಪ್ರತಿಯೊಬ್ಬರು ಶ್ರಮಿಸಿದ್ದಾರೆ, ಎಲ್ಲರಿಗೂ ಅಭಿನಂದನೆಗಳು. ಇದರಲ್ಲಿ ರಾಜಕೀಯ ಸಲ್ಲದು. ಪ್ರಧಾನಿ ಮೋದಿ ಅವರು ದೇಶದ ಪ್ರಧಾನಿಯಾಗಿ ಭೇಟಿ ನೀಡುತ್ತಿದ್ದಾರೆ ಇದು ಒಳ್ಳೆಯದು ಎಂದರು.

Latest Indian news

Popular Stories