ನನಗೆ ಟಿಕೇಟ್ ಸಿಗುವುದು ಬಿಡುವುದು ಎಂ.ಬಿ. ಪಾಟೀಲರಿಗೆ ಸಂಬಂಧಿಸಿದ ವಿಷಯವಲ್ಲ: ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ನನಗೆ ಟಿಕೇಟ್ ಸಿಗುವುದು ಬಿಡುವುದು ಎಂ.ಬಿ. ಪಾಟೀಲರಿಗೆ ಸಂಬಂಧಿಸಿದ ವಿಷಯವಲ್ಲ, ಅವರು ನಮ್ಮ ಪಾರ್ಟಿಯಲ್ಲಿಲ್ಲ, ಬೇಕಾದರೆ ನಮ್ಮ ಪಾರ್ಟಿಗೆ ಬಂದು ಹೇಳಲಿ ಆಗ ನೋಡೋಣ, ಹಾಗೆಂದ ಮಾತ್ರಕ್ಕೆ ನಾನೇನೂ ಪಾಟೀಲರಿಗೆ ಬಿಜೆಪಿಗೆ ಆಹ್ವಾನ ನೀಡುತ್ತಿಲ್ಲ. ನಮ್ಮಲ್ಲೇನೂ ನಾಯಕರ ಕೊರತೆ ಇಲ್ಲ, ನನಗೆ ಟಿಕೇಟ್ ಕೊಡುವುದು ಬಿಡುವುದು ನಮ್ಮ ಪಕ್ಷಕ್ಕೆ ಬಿಟ್ಟ ವಿಷಯ. ಅದು ಎಂ.ಬಿ. ಪಾಟೀಲರಿಗೆ ಸಂಬಂಧಿಸಿದ ವಿಷಯವಲ್ಲ ಎಂದು ರಮೇಶ ಜಿಗಜಿಣಗಿ ಎಂ.ಬಿ. ಪಾಟೀಲರ ಹೇಳಿಕೆಗೆ ತೀಕ್ಷ್ಣ್ಯವಾಗಿ ಪ್ರತಿಕ್ರಿಯೆ ನೀಡಿದರು.

ನಾನು ಕಾಂಗ್ರೆಸ್ ವಿರೋಧಿಯಾಗಿಯೇ ಜನ್ಮತಾಳಿದ್ದೇನೆ, ಕಾಂಗ್ರೆಸ್ ವಿರೋಧಿಯಾಗಿಯೇ ರಾಜಕಾರಣ ಮಾಡಿದ್ದೇನೆ, ಈಗ ಪಾರ್ಟಿ ಬದಲಾಯಿಸಿ ರಾಜಕಾರಣ ಮಾಡುವ ಔಚಿತ್ಯವೂ ನನಗಿಲ್ಲ, ಕಾಂಗ್ರೆಸ್ ಹೋಗುವ ಪ್ರಶ್ನೆಯೇ ಇಲ್ಲ, ಬಿಜೆಪಿ ಟಿಕೇಟ್ ಸಿಗುವುದು ಖಾತ್ರಿಯಾಗಿದೆ, ನನಗೂ ಸಹ ತಯಾರಿ ಮಾಡಿಕೊಳ್ಳುವಂತೆ ಸೂಚನೆಯೂ ಸಹ ದೊರಕಿದೆ, ಪಕ್ಷದವರು ಟಿಕೇಟ್ ನೀಡಿದರೆ ನಾನು ಚುನಾವಣೆಗೆ ಸ್ಪರ್ಧೆ ಮಾಡುವೆ, ಇಲ್ಲವಾದರೆ ಮನೆಯಲ್ಲಿಯೇ ಇರುವೆ ಎಂದರು.

Latest Indian news

Popular Stories