ವಿಜಯಪುರ: ತಂದೆಯನ್ನೇ ಹತ್ಯೆಗೈದು ಇಬ್ಬರು ಮಕ್ಕಳು ಫರಾರಿಯಾಗಿರುವ ಘಟನೆ ವಿಜಯಪುರ ನಗರದ ಹಮಾಲ ಕಾಲೋನಿಯಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಮನೆಯಲ್ಲೆ ಇದ್ದ ತಂದೆ ಮಲ್ಲಪ್ಪ (40) ನನ್ನು ಅವನ ಮಕ್ಕಳೆ ಹತ್ಯೆಗೈದು ಫರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.