ರಾಜ್ಯ ಬಿಜೆಪಿ ನಾಯಕತ್ವ ಕೊರತೆಯಿಂದ ಬಳಲುತ್ತಿದೆ: ರಾಮಲಿಂಗಾರೆಡ್ಡಿ

ಬಾಗಲಕೋಟೆ : ರಾಜ್ಯ ಬಿಜೆಪಿ ನಾಯಕತ್ವ ಕೊರತೆಯಿಂದ ಬಳಲುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಬಾಗಲಕೋಟೆ ತಾಲೂಕು ಸಂಶಿಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಣಬಲ, ತೋಳ್ಬಲ ಹಾಗೂ ಅಧಿಕಾರದ ಬಲದಿಂದ 36% ಮತಗಳನ್ನು ಪಡೆದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಇನ್ನೂ ಡೌನ್ ಆಗುತ್ತದೆ ಎಂದು ಭವಿಷ್ಯ ನುಡಿದರು.

ಸಾಲ ಮಾಡುವುದರಲ್ಲಿ ಬಿಜೆಪಿಯವರು ಎಕ್ಸಪರ್ಟ:
ಈ ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಬರೀ ಸಾಲ ಮಾಡಿಟ್ಟು ಹೋಗಿದೆ, ಸಾಲ ಮಾಡುವುದರಲ್ಲಿ ಬಿಜೆಪಿಯವರು ಎಕ್ಸಪರ್ಟ್ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
1947 ರಿಂದ 2018 ರ ವರೆಗೆ ರಾಜ್ಯದ ಸಾಲ 2.50 ಲಕ್ಷ ಕೋಟಿ ಇತ್ತು. ಬಿಜೆಪಿ ನಾಲ್ಕೇ ವರ್ಷದಲ್ಲಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಆಡಳಿತಾವಧಿಯಲ್ಲಿ 5.50 ಲಕ್ಷ ಕೋಟಿ ಸಾಲ ಮಾಡಿದೆ.
ಅಂದ್ರೆ ನಾಲ್ಕು ವರ್ಷದಲ್ಲಿ ಮೂರು ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಜೊತೆಗೆ 26 ಸಾವಿರ ಕೋಟಿ ಬಿಲ್ ಬಾಕಿ ಕೊಡೋದು ಬಿಟ್ಟು ಹೋಗಿದ್ದಾರೆ ಎಂದರು.


ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ದೇಶದಲ್ಲಿ ಪ್ರಧಾನಿ ಮೋದಿ ಅವರ 9 ವರ್ಷದ ಆಡಳಿತಾವಧಿಯಲ್ಲಿ 120 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಸ್ವಾತಂತ್ರ್ಯ ನಂತರ ಮೋದಿ ಅವರು ಬರುವ ತನಕ ದೇಶದ ಸಾಲ 52 ಸಾವಿರ ಲಕ್ಷ ಕೋಟಿ ಇತ್ತು. ಈಗ ದೇಶದ ಒಟ್ಟು ಸಾಲ 172 ಲಕ್ಷ ಕೋಟಿ ಆಗಿದೆ ಎಂದರು.

ಅಧಿಕಾರ ಬೇಡವೆಂದು ಬರುವವರಿಗೆ ಸ್ವಾಗತ:
ವಿಧಾನಸಭೆಯಲ್ಲಿ 135 ಶಾಸಕರನ್ನು ಹೊಂದಿರುವ ನಮಗೆ ಪಕ್ಷಾಂತರದ ಅವಶ್ಯಕತೆ ಇಲ್ಲ, ಯಾರೇ ಬರುವವರು ಅವರಾಗಿಯೇ ನಮ್ಮ ಪಕ್ಷದ ಸಿದ್ದಾಂತಕ್ಕೆ ತಲೆಬಾಗಿ ಬಂದರೆ ಬೇಡ ಎನ್ನುವುದಿಲ್ಲ. ಯಾವುದೇ ಅಧಿಕಾರ ಬೇಡ ಎಂದು ಬರುವವರನ್ನು ಸ್ವಾಗತಿಸುತ್ತೇವೆ. ನಮ್ಮ ಪಕ್ಷದ ವಿಚಾರಗಳನ್ನು ಮೆಚ್ಚಿಕೊಂಡು ಬರುವವರನ್ನು ನಾವು ಗೌರವಿಸುತ್ತೇವೆ ಎಂದು ಹೇಳಿದರು.
ಸಾಮಾನ್ಯವಾಗಿ ಸಿಎಂ ಮನೆಗೆ ಎಲ್ಲ ಶಾಸಕರು ಹೋಗಬಹುದು, ಸಿದ್ದರಾಮಯ್ಯನವರು ರಾಜ್ಯದ ಸಿಎಂ. ಅವರು ಬರೀ ಕಾಂಗ್ರೆಸ್ನವರಿಗೆ ಮುಖ್ಯಮಂತ್ರಿ ಅಲ್ಲ, ಅವರು ಎಲ್ಲ ಶಾಸಕರಿಗೂ ಸಿಎಂ ಆಗಿದ್ದಾರೆ ಎಂದರು.
ಈ ಹಿಂದೆ ಯಡಿಯೂರಪ್ಪ ಸಿಎಂ ಇದ್ದಾಗ ನಾವು ಸಹ ಅವರನ್ನು ಭೇಟಿ ಮಾಡಿದ್ದೇವೆ. ಹೀಗಾಗಿ ಶಾಸಕರು ಸಿಎಂ ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ, ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ತಿಳಿಸಿದರು.
ಕಾಂಗ್ರೆಸ್ ಗೆ ಉಳಿಗಾಲವಿಲ್ಲ ಎಂಬ ಮಾಜಿ ಸಚಿವ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಅವರ ಮಾತನ್ನು ಯಾಕೆ ನೀವು ಸೀರಿಯಸ್ ತೆಗೆದುಕೊಳ್ಳುತ್ತೀರಿ? ಎಂಪಿ ಎಲೆಕ್ಷನ್ ಬಳಿಕವು ಕಾಂಗ್ರೆಸ್ ಶಾಸಕರು ಎಲ್ಲೂ ಹೋಗುವುದಿಲ್ಲ. ಬಿಜೆಪಿಯವರಿಗೆ 36% ಪರ್ಸೆಂಟ್ ವೋಟ್ ಬಂದಿದೆ. ನಮಗೆ ಬಿಜೆಪಿಗಿಂತ 7% ಹೆಚ್ಚಿಗೆ ಮತಗಳು ಬಂದಿವೆ ಎಂದರು.

Latest Indian news

Popular Stories